BLR Today
ಮಂಗಳವಾರ, ಅಕ್ಟೋಬರ್ 27, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru2 ಗಂಟೆಗಳ ಹಿಂದೆ

ವಿದ್ಯಾಶಂಕರ ಪ್ರಶಸ್ತಿ ಬಿ. ನಂಜುಂಡಸ್ವಾಮಿ ಮತ್ತು ಸರ್ಫ್ರಾಜ್ ಚಂದ್ರಗುತ್ತಿಗೆ ಘೋಷಣೆ

ವಿದ್ಯಾಶಂಕರ ಪ್ರಶಸ್ತಿ ಬಿ. ನಂಜುಂಡಸ್ವಾಮಿ ಮತ್ತು ಸರ್ಫ್ರಾಜ್ ಚಂದ್ರಗುತ್ತಿಗೆ ಘೋಷಣೆ
ಚಿತ್ರ: Prajavani

ಡಾ.ಎಸ್‌.ವಿದ್ಯಾಶಂಕರ ಸಾಂಸ್ಕೃತಿಕ ಪ್ರತಿಷ್ಠಾನವು ನೀಡುವ 2026ನೇ ಸಾಲಿನ ‘ವಿದ್ಯಾಶಂಕರ ಪ್ರಶಸ್ತಿ’ಗೆ ತುಮಕೂರಿನ ಸಂಶೋಧಕ ಬಿ. ನಂಜುಂಡಸ್ವಾಮಿ ಹಾಗೂ ‘ವಿದ್ಯಾಶಂಕರ ಪುರಸ್ಕಾರ’ಕ್ಕೆ ಸಾಗರದ ಲೇಖಕ ಸರ್ಫ್ರಾಜ್ ಚಂದ್ರಗುತ್ತಿ ಆಯ್ಕೆಯಾಗಿದ್ದಾರೆ. ಹಿರಿಯ ಸಂಶೋಧಕರಿಗೆ ನೀಡುವ ವಿದ್ಯಾಶಂಕರ ಪ್ರಶಸ್ತಿಯು ₹ 30 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ. ಯುವ ಸಂಶೋಧಕರಿಗೆ ನೀಡುವ ವಿದ್ಯಾಶಂಕರ ಪುರಸ್ಕಾರವು ₹ 15 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ. ನ.19ರಂದು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡುವರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruAwardsLiterature