BLR Today
ಗುರುವಾರ, ನವೆಂಬರ್ 19, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru3 ದಿನಗಳ ಹಿಂದೆ

ಉಪೇಂದ್ರನ ಮಗನ ಮದುವೆಯಿಂದ ಸುದ್ದಿಯಲ್ಲೇ ಆಯುಷ್ ಮತ್ತು ಐಶ್ವರ್ಯ ಉಪೇಂದ್ರ ಫೋಟೋಗಳು ವೈರಲ್

ಉಪೇಂದ್ರನ ಮಗನ ಮದುವೆಯಿಂದ ಸುದ್ದಿಯಲ್ಲೇ ಆಯುಷ್ ಮತ್ತು ಐಶ್ವರ್ಯ ಉಪೇಂದ್ರ ಫೋಟೋಗಳು ವೈರಲ್
ಚಿತ್ರ: Asianet Suvarna News

ನಟ ಉಪೇಂದ್ರ ಅವರ ಮಗ, ನಟ ನಿರಂಜನ್ ಅವರು ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಸಂದರ್ಭದಲ್ಲಿ ಅನೇಕ ತಾರೆಯರು ಬಂದು ನೂತನ ವಧು-ವರರನ್ನು ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಎಲ್ಲರ ಗಮನ ಸೆಳೆದದ್ದು, ತಾರಾ ಜೋಡಿ ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಅವರ ಮಕ್ಕಳಾದ ಆಯುಷ್ ಮತ್ತು ಐಶ್ವರ್ಯ ಉಪೇಂದ್ರ. ಐಶ್ವರ್ಯ ಅವರಿಗೆ ಗೂಗಲ್ ದಾಖಲೆಯ ಪ್ರಕಾರ 21 ವರ್ಷ ವಯಸ್ಸು. ಕಾಲೇಜು ಓದುತ್ತಿರುವ ಐಶ್ವರ್ಯ, ಸಿನಿಮಾಗೆ ನಾಯಕಿಯಾಗಿ ಬರುವ ಯಾವುದೇ ಯೋಚನೆ ಮಾಡಿಲ್ಲ. ಮಗ ಆಯುಷ್​ಗೆ 22 ವರ್ಷ ವಯಸ್ಸು. ಆಯುಷ್​ ಅವರು ಮೊದಲ ಸಿನಿಮಾಕ್ಕೆ ರೆಡಿಯಾಗಿದ್ದಾರೆ.

ಮೂಲ ವರದಿ: Asianet Suvarna News ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruEntertainmentCelebrities