BLR Today
ಶುಕ್ರವಾರ, ನವೆಂಬರ್ 27, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಅಪರಾಧBengaluru2 ದಿನಗಳ ಹಿಂದೆ

ಹಗರಿಬೊಮ್ಮನಹಳ್ಳಿ: ಲಾಕಪ್ ಸಾವು ಪ್ರಕರಣದ ಆರೋಪಿಗಳಾದ ಇಬ್ಬರು ಪೊಲೀಸರಿಗೆ ಜಾಮೀನು

ಹಗರಿಬೊಮ್ಮನಹಳ್ಳಿ: ಲಾಕಪ್ ಸಾವು ಪ್ರಕರಣದ ಆರೋಪಿಗಳಾದ ಇಬ್ಬರು ಪೊಲೀಸರಿಗೆ ಜಾಮೀನು
ಚಿತ್ರ: Prajavani

ಹಗರಿಬೊಮ್ಮನಹಳ್ಳಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಲಾಕಪ್ ಸಾವು ಪ್ರಕರಣದ ಇಬ್ಬರು ಆರೋಪಿಗಳಿಗೆ ಸೋಮವಾರ ಹೊಸಪೇಟೆಯ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ಜಾಮೀನು ನೀಡಿದೆ. ಆಗಸ್ಟ್ 1ರ ಮಧ್ಯರಾತ್ರಿ ಕಟ್ಟಡ ಕಾರ್ಮಿಕ ಸಿ.ಖಲೀ ಲುಲ್ಲಾ(38) ಎನ್ನುವವರು ಪೊಲೀಸರು ನಡೆಸಿದ ಹಲ್ಲೆ ಯಿಂದಾಗಿ ಮೃತಪಟ್ಟಿದ್ದಾನೆ ಎಂದು ಆತನ ಪತ್ನಿ ಶಹನಾಜ್ ದೂರು ನೀಡಿದ್ದರು. ಹೆಡ್ ಕಾನ್‍ಸ್ಟೆಬಲ್ ರಾಘವೇಂದ್ರ ಹಾಗೂ ಕಾನ್‍ಸ್ಟೆಬಲ್ ವೆಂಕಟೇಶ್ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಕಳೆದ 3 ತಿಂಗಳುಗಳಿಂದ ಆರೋಪಿಗಳಿಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengalurucrimeHagaribommanahalli