BLR Today
ಶುಕ್ರವಾರ, ನವೆಂಬರ್ 6, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಅಪರಾಧBengaluru5 ಗಂಟೆಗಳ ಹಿಂದೆ

ಹೊಸಗುಡ್ಡದಹಳ್ಳಿಯಲ್ಲಿ ಆಸ್ತಿ ಆಸೆಗೆ ವೃದ್ಧೆ ಕೊಂದ ಇಬ್ಬರ ಸೆರೆ

ಹೊಸಗುಡ್ಡದಹಳ್ಳಿಯಲ್ಲಿ ಆಸ್ತಿ ಆಸೆಗೆ ವೃದ್ಧೆ ಕೊಂದ ಇಬ್ಬರ ಸೆರೆ
ಚಿತ್ರ: Prajavani

ಹೊಸಗುಡ್ಡದಹಳ್ಳಿಯಲ್ಲಿ ನಡೆದ ವೆಂಕಟಲಕ್ಷ್ಮಮ್ಮ (70) ಕೊಲೆ ಪ್ರಕರಣದ ಕುರಿತು ಬ್ಯಾಟರಾಯನಪುರ ಠಾಣೆ ಪೊಲೀಸರು ವೆಂಕಟಲಕ್ಷ್ಮಮ್ಮ ಅವರ ಸಂಬಂಧಿಗಳಾದ ಕಾಂತರಾಜು (39) ಮತ್ತು ಮಂಜಪ್ಪ (30) ಅವರನ್ನು ಬಂಧಿಸಿದ್ದಾರೆ. ಜಯನಗರದ ಬಳಿಯ ನಕ್ಕಲುಬಂಡೆ ನಿವಾಸಿ ಕಾಂತರಾಜು ಹಾಗೂ ದೊಡ್ಡ ಬಿದಿರಕಲ್ಲು ನಿವಾಸಿ ಮಂಜಪ್ಪ, ಮೃತ ವೆಂಕಟಲಕ್ಷ್ಮಮ್ಮ ಅವರಿಗೆ ದೂರದ ಸಂಬಂಧಿಕರು ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ತಿಗಾಗಿ ವೃದ್ಧೆಯನ್ನು ಕೊಲೆ ಮಾಡಿರುವುದು ತನಿಖೆಯಿಂದ ದೃಢಪಟ್ಟಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ನಿವೇಶನಗಳ ವಿಚಾರವಾಗಿ ವೆಂಕಟಲಕ್ಷ್ಮಮ್ಮ ಹಾಗೂ ಆರೋಪಿಗಳ ಮದ್ಯೆ ಮನಸ್ತಾಪ ಉಂಟಾಗಿತ್ತು. ಮೃತದೇಹದ ಮೇಲೆ ಆಭರಣಗಳು ಹಾಗೆಯೇ ಇದ್ದುದರಿಂದ, ಆಭರಣ ದೋಚುವ ಉದ್ದೇಶದಿಂದ ಕೊಲೆ ಮಾಡಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ಪತ್ತೆಯಾಗಿದೆ. ಕೊಲೆ ನಡೆದ ದಿನ ಅವರಿಗೆ ಆರೋಪಿಗಳು ಕರೆ ಮಾಡಿ ಮಾತನಾಡಿರುವುದು ತಿಳಿದು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
crimeBengalurumurderproperty dispute