ಡೇಟಿಂಗ್ ಆ್ಯಪ್‌ನಲ್ಲಿ ಯುವಕನಿಗೆ ಶಾಕ್: ಮನೆಗೆ ಬಂದು ₹20 ಲಕ್ಷದ ಚಿನ್ನ ದೋಚಿದ ಮಂಗಳಮುಖಿಯರು
ಸ್ನೇಹಿತನ ಮನೆಯಲ್ಲಿ ಯಾರೂ ಇಲ್ಲದಾಗ ಆತನ ಮನೆಗೆ ಹೋಗಿ ಖಾಸಗಿ ಕ್ಷಣ ಕಳೆಯಲು ಡೇಟಿಂಗ್ ಆ್ಯಪ್ ಮೂಲಕ ಯುವತಿಯನ್ನು ಬುಕ್ ಮಾಡಿದ್ದ ಯುವಕನಿಗೆ ಮಂಗಳಮುಖಿಯರು ಆಘಾತ ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಳಿಕ ಮತ್ತೋರ್ವ ಮಂಗಳಮುಖಿಯನ್ನು ಕರೆಸಿಕೊಂಡು ಯುವಕನಿಗೆ ಚಾಕು ತೋರಿಸಿ ಮನೆಯಲ್ಲಿದ್ದ ಬರೋಬ್ಬರಿ 20ಲಕ್ಷ ರೂ ಮೌಲ್ಯದ 226 ಗ್ರಾಂ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾರೆ. ಸದ್ಯ ಈ ಕುರಿತು ಮನೆಯ ಮಾಲೀಕ ದೂರು ನೀಡಿದ್ದು, ಇಬ್ಬರು ಮಂಗಳಮುಖಿಯರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮೂಲ ವರದಿ: Vijaya Karnataka
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruCrimeTheft


