13ನೇ ಬೆಂಗಳೂರು ಮ್ಯಾರಥಾನ್ ಹಿನ್ನೆಲೆ ವಾಹನಗಳ ಸಂಚಾರ ಮಾರ್ಗ ಬದಲಾವಣೆ
ಸೆಪ್ಟೆಂಬರ್ 27ರಂದು ಬೆಳಿಗ್ಗೆ 4 ರಿಂದ 11 ರವರೆಗೆ 13ನೇ ಆವೃತ್ತಿಯ ‘ಬೆಂಗಳೂರು ಮ್ಯಾರಥಾನ್’ ನಡೆಯಲಿದ್ದು, ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಮ್ಯಾರಥಾನ್‌ನಲ್ಲಿ ಅಂದಾಜು 25 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ವಿಧಾನಸೌಧ, ಶಿವಾಜಿನಗರ ಮತ್ತು ರಾಜಭವನ ರಸ್ತೆ ಕಡೆಗೆ ಹೋಗುವ ಸಾರ್ವಜನಿಕ ವಾಹನಗಳು ಪೊಲೀಸ್ ಕಾರ್ನರ್, ಕೆ.ಜಿ ರಸ್ತೆ, ಹಳೆ ಅಂಚೆ ಕಚೇರಿ ರಸ್ತೆ, ಕೆ.ಆರ್ ವೃತ್ತದ ಮಾರ್ಗವಾಗಿ ಅಂಬೇಡ್ಕರ್ ರಸ್ತೆಯ ಪಶ್ಚಿಮ ಭಾಗದ ಮೂಲಕ ಸಂಚರಿಸುವುದು. ಕ್ವೀನ್ಸ್ ರಸ್ತೆ ಮತ್ತು ಶಿವಾಜಿನಗರ ಕಡೆಯಿಂದ ಮಾರುಕಟ್ಟೆ ಹಾಗೂ ಮೆಜೆಸ್ಟಿಕ್ ಕಡೆಗೆ ತೆರಳುವ ವಾಹನಗಳು ಬಾಳೆಕುಂದ್ರಿ ವೃತ್ತದ ಮೂಲಕ ಕನ್ನಿಂಗ್ ಹ್ಯಾಂ ರಸ್ತೆ, ಚಂದ್ರಿಕಾ ಜಂಕ್ಷನ್ ಎಲ್‌ಆರ್‌ಡಿಇ ಜಂಕ್ಷನ್, ಬಸವೇಶ್ವರ ವೃತ್ತದ ಮೂಲಕ ಮುಂದೆ ಸಂಚರಿಸಬಹುದು.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruTraffic AdvisoryMarathonBBMP


