ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆ ವೀರಪಿಳ್ಳೈ ರಸ್ತೆಯಲ್ಲಿ ಸಂಚಾರ ಮಾರ್ಗ ಬದಲಾವಣೆ
ಶಿವಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ವೀರಪಿಳ್ಳೈ ರಸ್ತೆಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಸೆ.27ರವರೆಗೆ ವಾಹನಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ವೀರಪಿಳ್ಳೈ ರಸ್ತೆ ಹಾಗೂ ವಿಠೋಭ ದೇವಸ್ಥಾನದಿಂದ ನಾಗಮ್ಮ ದೇವಸ್ಥಾನದ ಕಡೆಗೆ ಹೋಗುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಡಿಕನ್ಸನ್ ಜಂಕ್ಷನ್ ಕಡೆಯಿಂದ ಪುಲಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಸಂಚರಿಸುವ ವಾಹನಗಳು (ಎಚ್ ಜಿವಿ ವಾಹನಗಳನ್ನು ಹೊರತುಪಡಿಸಿ) ಕಾಮರಾಜ ರಸ್ತೆಯಲ್ಲಿ ನೇರವಾಗಿ ಚಲಿಸಿ, ಸಂಗಂ ಕ್ರಾಸ್ ರಸ್ತೆ ಹತ್ತಿರ ಬಲಕ್ಕೆ ತಿರುವು ಪಡೆದು ಸೇಂಟ್ ಜಾನ್ಸ್ ರಸ್ತೆಯಲ್ಲಿ ಎಡಕ್ಕೆ ತಿರುವು ಪಡೆದುಕೊಳ್ಳಬೇಕು. ಆಲೀಸ್ ಜಂಕ್ಷನ್ ಕಡೆಯಿಂದ ಪುಲಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳು ಡಿಕನ್ಸನ್ ರಸ್ತೆಯ ಮೂಲಕ ನೇರವಾಗಿ ಚಲಿಸಿ, ಬ್ಲೂ–ಸ್ಟೋನ್ ಹತ್ತಿರ ಎಡಕ್ಕೆ ತಿರುವು ಪಡೆದು ಸೇಂಟ್ ಜಾನ್ಸ್ ರಸ್ತೆಯ ಮೂಲಕ ಪುಲಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಸಂಚರಿಸಬಹುದು.


