ಬೆಂಗಳೂರಿನ ಯುವ ಬ್ರಿಗೇಡ್ ಆಯೋಜಿಸಿದ ತಿರಂಗಾ ಯಾತ್ರೆ
ಯುವ ಬ್ರಿಗೇಡ್ ಆಯೋಜಿಸಿದ್ದ ‘ತಿರಂಗಾ ಹಿಡಿದು ಹೆಜ್ಜೆ ಹಾಕೋಣ ವಿಜಯಿ ಭವ’ ಕಾರ್ಯಕ್ರಮದಲ್ಲಿ ನೂರಾರು ಜನರು ಭಾಗವಹಿಸಿದ್ದರು. ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಿಂದ ಆರಂಭಗೊಂಡ ತಿರಂಗಾ ಯಾತ್ರೆಯು ಜಯನಗರದ ಶಾಲಿನಿ ಮೈದಾನದಲ್ಲಿ ಅಂತ್ಯಗೊಂಡಿತು. ವಿವಿಧ ಜಿಲ್ಲೆಗಳಿಂದ ಬಂದ ಯುವಕರು, ಸ್ವಾಮೀಜಿಗಳು, ನಿವೃತ್ತ ಸೈನಿಕರು ಸೇರಿ ಸಾರ್ವಜನಿಕರು ಸುಮಾರು 500 ಮೀಟರ್ ಉದ್ದದ 9 ಅಡಿ ಅಗಲದ ತಿರಂಗಾ ಧ್ವಜ ಹಿಡಿದು ‘ಭಾರತ ಮಾತಾಕಿ ಜೈ’ ಎಂಬ ಘೋಷವಾಕ್ಯದೊಂದಿಗೆ ಸಾಗಿದರು.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruJayanagarBasavanagudi


