BLR Today
ಮಂಗಳವಾರ, ಅಕ್ಟೋಬರ್ 13, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಅಪರಾಧBengaluru2 ಗಂಟೆಗಳ ಹಿಂದೆ

ಟೀ ಅಂಗಡಿಯಲ್ಲಿ ಫೋನ್ ಪೇ ಮೂಲಕ ಹಣ ಪಾವತಿ ಮಾಡಿದ ಬೈಕ್‌ ಕಳ್ಳರನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ

ಟೀ ಅಂಗಡಿಯಲ್ಲಿ ಫೋನ್ ಪೇ ಮೂಲಕ ಹಣ ಪಾವತಿ ಮಾಡಿದ ಬೈಕ್‌ ಕಳ್ಳರನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ
ಚಿತ್ರ: Prajavani

ಆನೇಕಲ್‌ನಲ್ಲಿ ಟೀ ಅಂಗಡಿಯಲ್ಲಿ ಫೋನ್ ಪೇ ಮೂಲಕ ಹಣ ಪಾವತಿ ಮಾಡಿದ ಬೈಕ್‌ ಕಳ್ಳರ ಮೊಬೈಲ್ ಸಂಖ್ಯೆ ಪತ್ತೆ ಹೆಚ್ಚಿಸಿ ಜಿಗಣಿ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ₹18 ಲಕ್ಷ ಮೌಲ್ಯದ 29 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಬೆಂಗಳೂರು ಮೂಲದ ರಾಜಶೇಖರ್ (28), ಚರಣ್‌ ಕುಮಾರ್ (19) ಮತ್ತು ಪವನ್‌ (21) ಬಂಧಿತರು. ಡಿವೈಎಸ್ಪಿ ಗೋಪಾಲ್‌ ನಾಯಕ್‌ ಮತ್ತು ಜಿಗಣಿ ಪೊಲೀಸ್‌ ಇನ್‌ಸ್ಪೆಕ್ಟರ್ ನವೀನ್ ನೇತೃತ್ವದಲ್ಲಿ ಸಿಬ್ಬಂದಿ ಕಾಶಿ, ಚನ್ನಬಸವ, ಮನು ಮತ್ತು ಆನಂದ್‌ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruAnekalJiganiCrime