ಕಾರು ಹರಿಸಿ ಕೊಲೆ: ಮೂವರ ಬಂಧನ
ರಸ್ತೆ ಗಲಾಟೆ ವಿಚಾರಕ್ಕೆ ಯುವಕನ ಮೇಲೆ ಕಾರು ಹರಿಸಿ ಕೊಲೆ ಮಾಡಿದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ರಂಜಿತ್ ಕುಮಾರ್ ಸಾಹು (25) ಕೊಲೆಯಾದವರು. ಕೃತ್ಯ ಎಸಗಿದ ಆರೋಪದ ಮೇರೆಗೆ ಅಜಯ್, ಸಾಜಲ್ ಮತ್ತು ಬಿಜೋನ್ ರಾಯ್ ಎಂಬುವವರನ್ನು ಬಂಧಿಸಲಾಗಿದೆ. ಅಕ್ಟೋಬರ್ 21ರಂದು ರಾತ್ರಿ ಆರೋಪಿಗಳ ಗುಂಪು ಬಿಟಿಎಂ ಲೇಔಟ್‌ನಲ್ಲಿ ನಡೆದು ಹೋಗುತ್ತಿದ್ದ ರಂಜಿತ್‌ಗೆ ಡಿಕ್ಕಿ ಹೊಡೆದು ಸುಮಾರು 100 ಮೀಟರ್ ದೂರ ಎಳೆದೊಯ್ದು ರಸ್ತೆ ಮಧ್ಯೆ ಬಿಟ್ಟು ಪರಾರಿಯಾಗಿತ್ತು.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruCrimeBTM LayoutElectronic City Police


