BLR Today
ಸೋಮವಾರ, ಅಕ್ಟೋಬರ್ 12, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru1 ಗಂಟೆಗಳ ಹಿಂದೆ

ಬೆಂಗಳೂರಿನ ಸೆಮಿಕಂಡಕ್ಟರ್ ಕಂಪನಿಗೆ ಅಮೆರಿಕದ ವೆಕ್ಟರ್ ಲೈನ್ ಕ್ಯಾಪಿಟಲ್‌ನಿಂದ ₹630 ಕೋಟಿ ಬೃಹತ್ ಹೂಡಿಕೆ

ಬೆಂಗಳೂರಿನ ಸೆಮಿಕಂಡಕ್ಟರ್ ಕಂಪನಿಗೆ ಅಮೆರಿಕದ ವೆಕ್ಟರ್ ಲೈನ್ ಕ್ಯಾಪಿಟಲ್‌ನಿಂದ ₹630 ಕೋಟಿ ಬೃಹತ್ ಹೂಡಿಕೆ
ಚಿತ್ರ: Asianet Suvarna News

ಬೆಂಗಳೂರಿನ ಹೀರೋ ಎಲೆಕ್ಟ್ರಾನಿಕ್ಸ್ ಸಮೂಹದ ಭಾಗವಾಗಿರುವ ಸೆಮಿಕಂಡಕ್ಟರ್ ಎಂಜಿನಿಯರಿಂಗ್ ಕಂಪನಿ ಟೆಸ್ಸಾಲ್ವ್ (Tessolve), ಅಮೆರಿಕ ಮೂಲದ ವೆಕ್ಟರ್ ಲೈನ್ ಕ್ಯಾಪಿಟಲ್ ನಿಂದ 75 ಮಿಲಿಯನ್ ಡಾಲರ್ (ಸುಮಾರು ₹630 ಕೋಟಿ) ಬೃಹತ್ ಹೂಡಿಕೆ ಪಡೆದುಕೊಂಡಿದೆ. ಜಾಗತಿಕ ಸೆಮಿಕಂಡಕ್ಟರ್ ಪೂರೈಕೆ ಸರಪಳಿಯ ಮೇಲೆ ಗಮನ ಹರಿಸುವ ವೆಕ್ಟರ್ ಲೈನ್ ಕ್ಯಾಪಿಟಲ್ ಸಂಸ್ಥೆಗೆ ಇದು ಭಾರತದಲ್ಲಿ ನಡೆದ ಪ್ರಥಮ ಹೂಡಿಕೆಯಾಗಿದೆ. ಈ ನೂತನ ಹೂಡಿಕೆದಾರ ಸಂಸ್ಥೆಯು ಟೆಸ್ಸೋಲ್ವ್ ನ ಅಸ್ತಿತ್ವದಲ್ಲಿರುವ ಪ್ರಮುಖ ಹೂಡಿಕೆದಾರರಾದ 'ಟಿಪಿಜಿ' ಮತ್ತು ಸಿಂಗಾಪುರ ಮೂಲದ 'ನೊವೊ ಟೆಲ್ಲಸ್' ಸಮೂಹದೊಂದಿಗೆ ಸೇರ್ಪಡೆಗೊಂಡಿದೆ.

ಮೂಲ ವರದಿ: Asianet Suvarna News ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruSemiconductorsInvestmentTessolve