BLR Today
ಮಂಗಳವಾರ, ಅಕ್ಟೋಬರ್ 27, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru2 ಗಂಟೆಗಳ ಹಿಂದೆ

ತಮಿಳ್ ಸೆಲ್ವಿ ಮತ್ತು ಬಿ.ಆರ್. ನಾಗರಾಜ್‌ಗೆ 'ನಿಸ್ಸೀಮ ಕನ್ನಡತಿ' ಮತ್ತು 'ಕನ್ನಡ ಕಟ್ಟಾಳು' ಪ್ರಶಸ್ತಿ

ತಮಿಳ್ ಸೆಲ್ವಿ ಮತ್ತು ಬಿ.ಆರ್. ನಾಗರಾಜ್‌ಗೆ 'ನಿಸ್ಸೀಮ ಕನ್ನಡತಿ' ಮತ್ತು 'ಕನ್ನಡ ಕಟ್ಟಾಳು' ಪ್ರಶಸ್ತಿ
ಚಿತ್ರ: Prajavani

ಕನ್ನಡ ಸಂಘರ್ಷ ಸಮಿತಿ ನೀಡುವ 2026ನೇ ಸಾಲಿನ ‘ನಿಸ್ಸೀಮ ಕನ್ನಡತಿ’ ಪ್ರಶಸ್ತಿಗೆ ಲೇಖಕಿ ತಮಿಳ್ ಸೆಲ್ವಿ ಹಾಗೂ ‘ಕನ್ನಡ ಕಟ್ಟಾಳು’ ಪ್ರಶಸ್ತಿಗೆ ಕನ್ನಡ ಹೋರಾಟಗಾರ ಬೆ.ರಾ.ನಾಗರಾಜ್ ಆಯ್ಕೆಯಾಗಿದ್ದಾರೆ. ಸ್ಮರಣಿಕೆ ಮತ್ತು ₹ 11 ಸಾವಿರ ನಗದು ಬಹುಮಾನ ಒಳಗೊಂಡ ಈ ಪ್ರಶಸ್ತಿಗಳನ್ನು ನವೆಂಬರ್ 15ರಂದು ಬೆಳಿಗ್ಗೆ 10.30ಕ್ಕೆ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಹಮ್ಮಿಕೊಂಡಿರುವ ಸಮಿತಿಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದು ಸಮಿತಿಯ ಅಧ್ಯಕ್ಷ ಎ.ಎಸ್.ನಾಗರಾಜ ಸ್ವಾಮಿ ತಿಳಿಸಿದ್ದಾರೆ. 80ನೇ ಜನ್ಮದಿನದ ಪ್ರಯುಕ್ತ ಕನ್ನಡ ಹೋರಾಟ ಗಾರ ರಾಮಣ್ಣ ಎಚ್. ಕೋಡಿಹೊಸಹಳ್ಳಿ ಅವರನ್ನು ಅಭಿನಂದಿಸಲಾಗುತ್ತಿದೆ. ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಲಿದ್ದು, ಲೇಖಕಿ ವಸುಂಧರಾ ಭೂಪತಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruLiteratureAwards