BLR Today
ಮಂಗಳವಾರ, ಅಕ್ಟೋಬರ್ 27, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru2 ಗಂಟೆಗಳ ಹಿಂದೆ

ಬೆಂಗಳೂರಿನ ಕಾರ್ಮಿಕರಲ್ಲಿ ಶ್ವಾಸಕೋಶದ ಸಮಸ್ಯೆ ಕಂಡುಬಂದಿದೆ

ಬೆಂಗಳೂರಿನ ಕಾರ್ಮಿಕರಲ್ಲಿ ಶ್ವಾಸಕೋಶದ ಸಮಸ್ಯೆ ಕಂಡುಬಂದಿದೆ
ಚಿತ್ರ: Prajavani

ಬೆಂಗಳೂರಿನ ಸಂಚಾರ ಪೊಲೀಸ್ ಸಿಬ್ಬಂದಿ, ಬಸ್ ಚಾಲಕರು, ಪೌರ ಕಾರ್ಮಿಕರು ಸೇರಿದಂತೆ ಶೇ 45ಕ್ಕೂ ಹೆಚ್ಚು ಕಾರ್ಮಿಕರಲ್ಲಿ ಶ್ವಾಸಕೋಶದ ಕಾರ್ಯಕ್ಷಮತೆ ಕುಸಿತದ ಆರಂಭಿಕ ಲಕ್ಷಣಗಳು ಕಂಡುಬಂದಿವೆ ಎಂದು ವರದಿ ತಿಳಿಸಿದೆ. ವಾಹನಗಳಿಂದ ಹೊರಸೂಸುವ ವಾಯುಮಾಲಿನ್ಯ ಮತ್ತು ವಿಷಕಾರಿ ದೂಳಿನ ನಿರಂತರ ಸಂಪರ್ಕವೇ ಇದಕ್ಕೆ ಪ್ರಮುಖ ಕಾರಣ ಎಂದು ವಾಯು ಆಕ್ಯುಪೇಷನಲ್‌ ಆ್ಯಂಡ್‌ ಎನ್ವಿರಾಂನ್‌ ಮೆಂಟಲ್‌ ರೆಸ್ಪ್ರಿರೇಟರಿ ಇಲ್‌ನೆಸ್‌ ಕ್ಲಿನಿಕ್‌ (ವಿಒಇಆರ್‌ಐಸಿ– ವಾಯು) ವರದಿ ತಿಳಿಸಿದೆ. ವಿಒಇಆರ್‌ಐಸಿ ಸೋಮವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ನಗರವನ್ನು ರಕ್ಷಿಸುವವರ ಆರೋಗ್ಯ ರಕ್ಷಣೆ’ ಎಂಬ ವಿಷಯದ ಚರ್ಚೆಯಲ್ಲಿ ಈ ಅಧ್ಯಯನದ ಫಲಿತಾಂಶಗಳನ್ನು ಮಂಡಿಸಲಾಯಿತು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruHealthPollutionWorkers