BLR Today
ಭಾನುವಾರ, ಅಕ್ಟೋಬರ್ 11, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru3 ಗಂಟೆಗಳ ಹಿಂದೆ

ನಾಯಿಗಳನ್ನು ದೊಡ್ಡಿಗೆ ಹಾಕಬೇಡಿ: ವಿದ್ಯಾರ್ಥಿ ಸಂಘಟನೆ ಆಗ್ರಹ

ನಾಯಿಗಳನ್ನು ದೊಡ್ಡಿಗೆ ಹಾಕಬೇಡಿ: ವಿದ್ಯಾರ್ಥಿ ಸಂಘಟನೆ ಆಗ್ರಹ
ಚಿತ್ರ: Prajavani

ನಾಯಿಗಳನ್ನು ದೊಡ್ಡಿಗೆ ಹಾಕುವ ಬದಲು ಪ್ರಾಣಿ ಜನನ ನಿಯಂತ್ರಣ (ಎಬಿಸಿ) ಮತ್ತು ರೇಬಿಸ್ ವಿರೋಧಿ ಲಸಿಕೆ (ಎಆರ್‌ವಿ) ನೀಡುವ ಮೂಲಕ ವೈಜ್ಞಾನಿಕ ಆರೈಕೆ ಮತ್ತು ರಕ್ಷಣೆ ನೀಡಬೇಕು ಎಂದು ‘ಸ್ಟೂಡೆಂಟ್ಸ್ ಫಾರ್ ಸ್ಟ್ರೀಟೀಸ್’ ವಿದ್ಯಾರ್ಥಿ ಸಂಘಟನೆ ಆಗ್ರಹಿಸಿದೆ. ವಿವಿಧ ಕಾಲೇಜುಗಳ ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ಪ್ರಾಣಿ ಕಲ್ಯಾಣ ಸಂಸ್ಥೆಗಳ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನಾಯಿಗಳನ್ನು ಇರಿಸಲು ದೊಡ್ಡಿ ನಿರ್ಮಿಸುವುದು ಸರಿಯಲ್ಲ. ಆರೋಗ್ಯವಂತ ನಾಯಿಗಳನ್ನು ದೀರ್ಘಕಾಲ ಕೂಡಿಹಾಕುವುದು ಹಿಂಸೆ ನೀಡಿದಂತಾಗಲಿದೆ’ ಎಂದು ಹೇಳಿದರು. ಸಮುದಾಯದ ನಾಯಿಗಳನ್ನು ಕೂಡಿಹಾಕಲು ಬೃಹತ್‌ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಮೊದಲು ವಿದ್ಯಾರ್ಥಿಗಳು, ನಾಗರಿಕರು, ಪ್ರಾಣಿ ಕಲ್ಯಾಣ ಸಂಸ್ಥೆಗಳು, ಪಶುವೈದ್ಯಕೀಯ ವೃತ್ತಿಪರರೊಂದಿಗೆ ಸಮಾಲೋಚನೆ ಮಾಡಬೇಕು ಎಂದು ಒತ್ತಾಯಿಸಿದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.