BLR Today
ಭಾನುವಾರ, ಸೆಪ್ಟೆಂಬರ್ 27, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಶಿಕ್ಷಣBengaluru2 ಗಂಟೆಗಳ ಹಿಂದೆ

ವಿದ್ಯಾರ್ಥಿನಿ ಚಿನ್ಮಯಿ ಕಶ್ಯಪ್‌ಗೆ 7 ಚಿನ್ನದ ಪದಕ, ಬಿ.ಎಂ.ಎಸ್. ವಿದ್ಯಾರ್ಥಿಗಳಿಗೆ 8 ರ್ಯಾಂಕ್‌ಗಳು ವಿಟಿಯು ಘಟಿಕೋತ್ಸವದಲ್ಲಿ

ವಿದ್ಯಾರ್ಥಿನಿ ಚಿನ್ಮಯಿ ಕಶ್ಯಪ್‌ಗೆ 7 ಚಿನ್ನದ ಪದಕ, ಬಿ.ಎಂ.ಎಸ್. ವಿದ್ಯಾರ್ಥಿಗಳಿಗೆ 8 ರ್ಯಾಂಕ್‌ಗಳು ವಿಟಿಯು ಘಟಿಕೋತ್ಸವದಲ್ಲಿ
ಚಿತ್ರ: Prajavani

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) 26ನೇ ವಾರ್ಷಿಕ ಘಟಿಕೋತ್ಸವದಲ್ಲಿ ಸಿಎಂಆರ್‌ ತಾಂತ್ರಿಕ ಮಹಾವಿದ್ಯಾಲಯದ (ಸಿಎಂಆರ್‌ಐಟಿ) ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯ ರಿಂಗ್ ವಿಭಾಗದ ವಿದ್ಯಾರ್ಥಿನಿ ಚಿನ್ಮಯಿ ಎಂ. ಕಶ್ಯಪ್ 7 ಚಿನ್ನದ ಪದಕ ಪಡೆಯುವ ಮೂಲಕ ರಾಜ್ಯದಲ್ಲೇ ಮೂರನೇ ಸ್ಥಾನ ಪಡೆದ ಗೌರವಕ್ಕೆ ಪಾತ್ರರಾಗಿದ್ದಾರೆ. ಬಿ.ಎಂ.ಎಸ್. ಕಾಲೇಜ್ ಆಫ್ ಆರ್ಕಿಟೆಕ್ಚರ್‌ ಆ್ಯಂಡ್ ಪ್ಲಾನಿಂಗ್ ವಿದ್ಯಾರ್ಥಿಗಳು ಬಿ.ಆರ್ಕ್ ಪದವಿಯಲ್ಲಿ ಒಟ್ಟು 8 ರ್ಯಾಂಕ್‌ಗಳನ್ನು ಪಡೆದಿದ್ದಾರೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
VTUCMRITBMS CollegeBengaluruEducation