BLR Today
ಶುಕ್ರವಾರ, ನವೆಂಬರ್ 27, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru1 ದಿನಗಳ ಹಿಂದೆ

ಪರಿಕ್ರಮ ಚಾಂಪಿಯನ್ಸ್ ಲೀಗ್‌ನಲ್ಲಿ ಸ್ಟೋನ್ಹಿಲ್ ಶಾಲಾ ತಂಡ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ

ಪರಿಕ್ರಮ ಚಾಂಪಿಯನ್ಸ್ ಲೀಗ್‌ನಲ್ಲಿ ಸ್ಟೋನ್ಹಿಲ್ ಶಾಲಾ ತಂಡ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ
ಚಿತ್ರ: Prajavani

ಬೆಂಗಳೂರಿನ ತರಹುಣಿಸೆಯ ಸ್ಟೋನ್‌ಹಿಲ್ ಸರ್ಕಾರಿ ಪ್ರೌಢಶಾಲಾ ತಂಡವು ಬುಧವಾರ ಆರಂಭವಾದ 14ನೇ ಆವೃತ್ತಿಯ ಪರಿಕ್ರಮ ಚಾಂಪಿಯನ್ಸ್ ಲೀಗ್ (ಪಿಸಿಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದೆ. 16 ವರ್ಷದೊಳಗಿನವರ ಈ ಅಂತರಶಾಲಾ ಲೀಗ್‌ನ ಪ್ರಿಕ್ವಾರ್ಟರ್‌ ಫೈನಲ್‌ನಲ್ಲಿ ಸ್ಟೋನ್‌ಹಿಲ್ ತಂಡವು 4–0ಯಿಂದ ಬಾಲ್ಡ್‌ವಿನ್‌ ಪ್ರೌಢಶಾಲಾ ತಂಡವನ್ನು ಮಣಿಸಿತು. ಸ್ಟೋನ್‌ಹಿಲ್ ತಂಡದ ಮೊಹಮ್ಮದ್‌ ಆಸಿಫ್‌ (18ನೇ, 19ನೇ ಮತ್ತು 28ನೇ ನಿ.) ಹ್ಯಾಟ್ರಿಕ್‌ ಗೋಲು ಹೊಡೆದರೆ, ಶೇಕ್‌ ಸಾಹಿಲ್‌ (23ನೇ ನಿ.) ಒಂದು ಗೋಲು ಹೊಡೆದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
footballBengalurusportseducation