ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯ ಫಲಿತಾಂಶ ಪ್ರಕಟ
ಬೆಂಗಳೂರಿನಲ್ಲಿ ಇಂಧನ ದಕ್ಷತೆ ಬ್ಯೂರೋ ವತಿಯಿಂದ ನಗರದ ಕೇಂದ್ರ ವಿದ್ಯುತ್ ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ. 'ಎ' ವಿಭಾಗದ ಸ್ಪರ್ಧೆಯಲ್ಲಿ ಬ್ರಹ್ಮಾವರದ ಜಿ.ಎಂ. ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ 7ನೇ ತರಗತಿಯ ನಿಹಾರ್ ಜೆ.ಎಸ್. (ಪ್ರಥಮ), ಹೆಬ್ರಿಯ ಮುನಿಯಾಲು ಕೆ.ಪಿ.ಎಸ್.ನ 7ನೇ ತರಗತಿಯ ಸ್ತುತಿ ಆಚಾರ್ಯ (ದ್ವಿತೀಯ), ಉಡುಪಿ ಮುಕುಂದ ಕೃಪ ಶಾಲೆಯ 6ನೇ ತರಗತಿಯ ತೇಜಸ್ವಿನಿ ಯು. ರಾವ್ (ತೃತೀಯ ಸ್ಥಾನ) ಪಡೆದಿದ್ದಾರೆ. 'ಬಿ' ವಿಭಾಗದ ಸ್ಪರ್ಧೆಯಲ್ಲಿ ಉರ್ವಾ ಕೆನರಾ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿಯ ಅದಿತ್ (ಪ್ರಥಮ), ಬೆಳಗಾವಿಯ ಭರತೇಶ್ ಸೆಂಟ್ರಲ್ ಸ್ಕೂಲ್‌ನ 9ನೇ ತರಗತಿಯ ಪೃಥ್ವೀಶ್ ಎನ್. ದೊಂಬಾರ್ (ದ್ವಿತೀಯ), ಮೈಸೂರಿನ ಭಾರತೀಯ ವಿದ್ಯಾಭವನದ 8ನೇ ತರಗತಿಯ ಕೃಥ್ವಿನಿ ವಿಜಯ್ (ತೃತೀಯ ಸ್ಥಾನ) ಪಡೆದಿದ್ದಾರೆ. ವಿಜೇತರು ಡಿಸೆಂಬರ್ 11 ರಂದು ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.


