BLR Today
ಭಾನುವಾರ, ಅಕ್ಟೋಬರ್ 18, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru1 ಗಂಟೆಗಳ ಹಿಂದೆ

ಜಂಟಿ ಆಸ್ತಿ ಮಾಲೀಕತ್ವದ ‘ಎ-ಖಾತಾ’ ಹೊಂದಿರುವವರಿಗೆ ಪ್ರತ್ಯೇಕ ಇಖಾತಾ ಪಡೆಯಲು ರಾಜ್ಯ ಸರ್ಕಾರ ಅವಕಾಶ

ಜಂಟಿ ಆಸ್ತಿ ಮಾಲೀಕತ್ವದ ‘ಎ-ಖಾತಾ’ ಹೊಂದಿರುವವರಿಗೆ ಪ್ರತ್ಯೇಕ ಇಖಾತಾ ಪಡೆಯಲು ರಾಜ್ಯ ಸರ್ಕಾರ ಅವಕಾಶ
ಚಿತ್ರ: Kannada Prabha

ಬೆಂಗಳೂರಿನ ಸಣ್ಣ ಆಸ್ತಿ ಮಾಲೀಕರು ಹಾಗೂ ಜಂಟಿ ಆಸ್ತಿ ಹೊಂದಿರುವವರ ದಶಕಗಳ ಸಮಸ್ಯೆಗೆ ರಾಜ್ಯ ಸರ್ಕಾರ ಬಿಗ್ ರಿಲೀಫ್ ನೀಡಿದೆ. ಒಂದೇ ಆಸ್ತಿಗೆ ಜಂಟಿಯಾಗಿ 'ಎ-ಇಖಾತಾ' (A-eKhata) ಹೊಂದಿರುವ ಮಾಲೀಕರು, ಇನ್ನು ಮುಂದೆ ಆನ್‌ಲೈನ್ ಮೂಲಕವೇ ತಮ್ಮ ಪಾಲಿನ ಆಸ್ತಿಯನ್ನು ವಿಭಜಿಸಿಕೊಂಡು ಸ್ವತಂತ್ರ ಇಖಾತಾ ಪಡೆಯಬಹುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮತ್ತು ಬೆಂಗಳೂರಿನ ಐದು ನಗರ ಪಾಲಿಕೆಗಳು ಇ-ಆಸ್ತಿ 2.0 ಜಾಲತಾಣದಲ್ಲಿ ‘ಪ್ಲಾಟ್ ಉಪವಿಭಾಗ’ ಸೇವೆಯನ್ನು ಆರಂಭಿಸಿವೆ ಎಂದು ತಿಳಿಸಿದ್ದಾರೆ.

ಮೂಲ ವರದಿ: Kannada Prabha ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruReal EstateProperty LawBBMPGBA