BLR Today
ಗುರುವಾರ, ಅಕ್ಟೋಬರ್ 1, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru3 ಗಂಟೆಗಳ ಹಿಂದೆ

ರಾಜ್ಯ ಸರ್ಕಾರ ಮಲ್ಟಿಪ್ಲೆಕ್ಸ್‌ ಸಿನಿಮಾ ಟಿಕೆಟ್ ದರದ ಮೇಲೆ 2% ಸೆಸ್ ಸಂಗ್ರಹಣೆಯ ಕುರಿತು ಆತುರದ ಕ್ರಮ ಕೈಗರುವುದಿಲ್ಲ

ರಾಜ್ಯ ಸರ್ಕಾರ ಮಲ್ಟಿಪ್ಲೆಕ್ಸ್‌ ಸಿನಿಮಾ ಟಿಕೆಟ್ ದರದ ಮೇಲೆ 2% ಸೆಸ್ ಸಂಗ್ರಹಣೆಯ ಕುರಿತು ಆತುರದ ಕ್ರಮ ಕೈಗರುವುದಿಲ್ಲ
ಚಿತ್ರ: Prajavani

ಮಲ್ಟಿಪ್ಲೆಕ್ಸ್‌ ಸಿನಿಮಾ ಟಿಕೆಟ್ ದರದ ಮೇಲೆ 2% ಸೆಸ್ ಸಂಗ್ರಹಣೆ ವಿಚಾರದ ಕುರಿತು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ. ಮಲ್ಟಿಪ್ಲೆಕ್ಸ್‌ ಅಸೋಸಿಯೇಷನ್ ಆಫ್ ಇಂಡಿಯಾ (ಎಂಐಎ), ಪಿವಿಆರ್ ಐನಾಕ್ಸ್ ಲಿಮಿಟೆಡ್ ಮತ್ತು ಷೇರುದಾರ ಪ್ರತೀಕ್‌ ಚೌಹಾಣ್‌ ಮತ್ತಿತರರು ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ನ್ಯಾಯಪೀಠ, ‘ಕಾಯ್ದೆಯ ಕಲಂ 9ರ ಪ್ರಕಾರ ಅರ್ಜಿದಾರರು ಪ್ರತಿ ತಿಂಗಳೂ ಸೆಸ್‌ ಸಂಗ್ರಹಿಸಿದ ವರದಿಯ ಅನುಪಾಲನೆ ಮಾಡಬೇಕು ಎಂದಿದೆ. ಈಗ ಕಾಯ್ದೆಯ ಸಿಂಧುತ್ವವನ್ನೇ ಪ್ರಶ್ನಿಸಿರುವ ಕಾರಣ ಆತುರದ ಕ್ರಮಕ್ಕೆ ಮುಂದಾಗಬಾರದು’ ಎಂದು ಹೇಳಿತು. ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಭಾನುಪ್ರಕಾಶ್‌, ‘ಕಾಯ್ದೆ ಬುಧವಾರದಿಂದ ಜಾರಿಗೆ ಬಂದಿದೆ. ಮೂರ್ನಾಲ್ಕು ದಿನಗಳ ಕಾಲಾವಕಾಶ ನೀಡಿದರೆ ಆಕ್ಷೇಪಣೆ ಸಲ್ಲಿಸಲಾಗುವುದು’ ಎಂದರು. ವಿಚಾರಣೆಯನ್ನು ಅ. 26ಕ್ಕೆ ಮುಂದೂಡಲಾಗಿದೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruLegalCinemaState Govt