BLR Today
ಗುರುವಾರ, ನವೆಂಬರ್ 19, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru2 ದಿನಗಳ ಹಿಂದೆ

ಅಂಗವಿಕಲರಿಗೆ ನ.17ರಂದು ಬೆಂಗಳೂರಿನಲ್ಲಿ ವಿಶೇಷ ಉದ್ಯೋಗ ಮೇಳ

ಅಂಗವಿಕಲರಿಗೆ ನ.17ರಂದು ಬೆಂಗಳೂರಿನಲ್ಲಿ ವಿಶೇಷ ಉದ್ಯೋಗ ಮೇಳ
ಚಿತ್ರ: Prajavani

ಬೆಂಗಳೂರಿನ ಅಂಗವಿಕಲರ ರಾಷ್ಟ್ರೀಯ ವೃತ್ತಿ ಸೇವಾ ಕೇಂದ್ರದಿಂದ ಅಂಗವಿಕಲರಿಗಾಗಿ ನ.17ರಂದು ವಿಶೇಷ ಉದ್ಯೋಗ ಮೇಳ ಆಯೋಜಿಸಲಾಗಿದೆ. ಶ್ನೇಯ್ಡರ್ ಎಲೆಕ್ಟ್ರಿಕ್ ಸಂಸ್ಥೆಯು ಅಲೋಕ ಕ್ಯಾಂಪಸ್‍ನಲ್ಲಿರುವ ‘ಪ್ರೊಡಕ್ಷನ್ ಅಸೋಸಿಯೇಟ್/ಆಪರೇಟರ್’ ಹುದ್ದೆಗಳಿಗೆ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಐಟಿಐ, ಡಿಪ್ಲಮಾ ಅಥವಾ ಪದವಿ ಪಡೆದವರನ್ನು, ಮಿಟ್ಟಿ ಕೆಫೆ ಸಂಸ್ಥೆಯು ವಿವಿಧ ಹುದ್ದೆಗಳಿಗೆ ಯಾವುದೇ ವಿದ್ಯಾರ್ಹತೆ ಹೊಂದಿರುವವರನ್ನು ಹಾಗೂ ಆಲ್ ಡಿಜಿಟೆಕ್ ಸಂಸ್ಥೆಯು ‘ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್’ ಹುದ್ದೆಗಳಿಗೆ ಪಿಯುಸಿ, ಡಿಪ್ಲಮಾ ಅಥವಾ ಯಾವುದೇ ಪದವಿ ಹೊಂದಿರುವ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಿದೆ. ಆಸಕ್ತರು ವಿದ್ಯಾರ್ಹತೆ ಪ್ರಮಾಣ ಪತ್ರ, ಭಾವಚಿತ್ರ, ಯುಡಿಡಿ ಕಾರ್ಡ್, ಆಧಾರ್ ಕಾರ್ಡ್, ಬಯೋಡೇಟಾದೊಂದಿಗೆ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 3ರವರೆಗೆ ಅಂಗವಿಕಲರ ರಾಷ್ಟ್ರೀಯ ವೃತ್ತಿ ಸೇವಾ ಕೇಂದ್ರದ ಆವರಣ, ಎ-417, 1ನೇ ‘ಬಿ’ ಮುಖ್ಯ ರಸ್ತೆ, 1ನೇ ಕ್ರಾಸ್, 1ನೇ ಹಂತ, ಪೀಣ್ಯ ಪೊಲೀಸ್ ಸ್ಟೇಷನ್ ಹಿಂಭಾಗದಲ್ಲಿ ನಡೆಯಲಿರುವ ಮೇಳದಲ್ಲಿ ಭಾಗವಹಿಸ ಬಹುದು. ಮಾಹಿತಿಗೆ ದೂ.ಸಂ. 080-28392907 ಸಂಪರ್ಕಿಸಬಹುದು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruJobsDisability