BLR Today
ಶುಕ್ರವಾರ, ನವೆಂಬರ್ 6, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಅಪರಾಧBengaluru1 ಗಂಟೆಗಳ ಹಿಂದೆ

7 ಜನರ ಹತ್ಯೆ ಪ್ರಕರಣ: ಆರೋಪಿಯ ಕಳ್ಳಾಟ ಬಯಲಾಗಿದ್ದೇ ರೋಚಕ!

7 ಜನರ ಹತ್ಯೆ ಪ್ರಕರಣ: ಆರೋಪಿಯ ಕಳ್ಳಾಟ ಬಯಲಾಗಿದ್ದೇ ರೋಚಕ!
ಚಿತ್ರ: TV9 Kannada

ಬೆಂಗಳೂರಿನಲ್ಲಿ ನಡೆದ 7 ಜನರ ಹತ್ಯೆ ಪ್ರಕರಣ ವಿಚಾರವಾಗಿ ವಿಚಾರಣೆ ವೇಳೆ ಮತ್ತಷ್ಟು ಸ್ಫೋಟಕ ಮಾಹಿತಿಗಳು ಬಯಲಾಗಿವೆ. ಆರೋಪಿ ಇಂದುಶೇಖರ್ ಅವರು ಹೆಂಡತಿಯೊಂದಿಗೆ ಮದ್ಯ ಸೇವಿಸಿದ್ದ ಬಳಿಕ ಗಲಾಟೆ ಆರಂಭಿಸಿ ಕೊಲೆ ಮಾಡಿದ್ದಾರೆ. ಬಳಿಕ ಎರಡೂ ಮೃತದೇಹಗಳನ್ನು ಹೊರಗಡೆ ಕೊಂಡೊಯ್ದು ಬಿಸಾಕಿದ್ದಾರೆ. ನಂತರ ಶ್ರೀರಾಂಪುರ ಪೊಲೀಸ್ ಠಾಣೆಗೆ ಆಗಮಿಸಿ ಮಿಸ್ಸಿಂಗ್ ಕೇಸ್ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ವಿಚಾರಣೆ ವೇಳೆ ಆರೋಪಿ ಪ್ರಕಾರ ಸಾಮೂಹಿಕ ಹತ್ಯಾಕಾಂಡವು ಎ.16 ರಿಂದಲೇ ಆರಂಭವಾಗಿತ್ತು. ಶವಗಳನ್ನು ಚಿಕ್ಕಬಳ್ಳಾಪುರ ತಾಲೂಕಿನ ನಂದಿಬೆಟ್ಟ, ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿಘಾಟ್ ಹಾಗೂ ತಮಿಳುನಾಡಿಗೆ ಕೊಂಡೊಯ್ದು ಎಸೆದಿದ್ದರು.

ಮೂಲ ವರದಿ: TV9 Kannada ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruCrimeMurderInvestigation