ಬಿಐಎಸ್ ಬೆಂಗಳೂರಿನಲ್ಲಿ ಎ.ಐ ಮತ್ತು ಸ್ವಯಂಚಾಲಿತ ವ್ಯವಸ್ಥೆಗಳ ಕುರಿತು ವಿಚಾರ ಸಂಕಿರಣ
‘ವಿಶ್ವ ಗುಣಮಟ್ಟ ದಿನ’ದ ಅಂಗವಾಗಿ ಬಿಐಎಸ್ ಬೆಂಗಳೂರು ಶಾಖೆಯ ಪ್ರಯೋಗಾಲಯವು ಶುಕ್ರವಾರ ‘ಪ್ರಯೋಗಾಲಯ ಚಟುವಟಿಕೆಗಳಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಸ್ವಯಂಚಾಲಿತ ವ್ಯವಸ್ಥೆ’ ಕುರಿತು ವಿಚಾರ ಸಂಕಿರಣವನ್ನು ಆಯೋಜಿಸಿತು. ನಗರದ ಐಐಎಸ್‌ಸಿ ಉಪನ್ಯಾಸಕ ಚಿರಂಜೀವ್ ಭಟ್ಟಾಚಾರ್ಯ ಅವರು ಪ್ರಯೋಗಾಲಯದ ಚಟುವಟಿಕೆಗಳಲ್ಲಿ ಎ.ಐ ಹಾಗೂ ಸ್ವಯಂಚಾಲಿತ ವ್ಯವಸ್ಥೆಗಳ ಪಾತ್ರವನ್ನು ವಿವರಿಸಿದರು. ಹೈದರಾಬಾದ್‌ನ ಇನ್‌ಸ್ಮಾರ್ಟ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಅಭಿನವ್ ಬಿಸೆನ್ ಅವರು ‘ಗುಣಮಟ್ಟ ನಿಯಂತ್ರಣದಲ್ಲಿ ಸ್ವಯಂ ಚಾಲಿತ ವ್ಯವಸ್ಥೆಯ ಅತ್ಯಾಧುನಿಕ ಸ್ಥಿತಿಗತಿ’ ಕುರಿತು ಮಾತನಾಡಿದರು.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruBISAITechnology


