BLR Today
ಶುಕ್ರವಾರ, ಅಕ್ಟೋಬರ್ 9, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru4 ಗಂಟೆಗಳ ಹಿಂದೆ

ಬೆಂಗಳೂರಿನಲ್ಲಿ ಸ್ವ–ಉದ್ಯೋಗ ಕಾರ್ಯಾಗಾರ, ಸಮಾವೇಶ ಆಯೋಜನೆ

ಬೆಂಗಳೂರಿನಲ್ಲಿ ಸ್ವ–ಉದ್ಯೋಗ ಕಾರ್ಯಾಗಾರ, ಸಮಾವೇಶ ಆಯೋಜನೆ
ಚಿತ್ರ: Prajavani

ಕರ್ನಾಟಕ ಆರ್ಯವೈಶ್ಯ ಮಹಾಸಭಾ ಸಹಯೋಗದಲ್ಲಿ ಡಿ.25 ರಿಂದ 27ರವರೆಗೆ ಬೆಂಗಳೂರಿನಲ್ಲಿ ಸ್ವ–ಉದ್ಯೋಗ ಕಾರ್ಯಾಗಾರ ಹಾಗೂ ಸಮಾವೇಶ ಆಯೋಜಿಸಲಾಗಿದೆ. ನಗರೇಶ್ವರ ದೇವಸ್ಥಾನದಲ್ಲಿ ನಡೆದ ಆರ್ಯವೈಶ್ಯ ಸಮಾಜ ಬಾಂಧವರ ಪೂರ್ವಭಾವಿ ಸಭೆಯಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿ ಶಿರಗುಂಪಿಯ ಹನುಮಂತಯ್ಯ ಶ್ರೇಷ್ಠಿ ಮಾತನಾಡಿ, ಉದ್ಯಮಗಳಲ್ಲಿ ಯಶಸ್ಸು ಸಾಧಿಸಲು ನುರಿತ ತಜ್ಞರಿಂದ ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು. ಹೊಸ ಉದ್ಯಮ, ಹಣಕಾಸಿನ ವ್ಯವಹಾರ ವೃದ್ಧಿ ಹಾಗೂ ಹಳೆಯ ವ್ಯಾಪಾರ ವಹುವಾಟು ಅಭಿವೃದ್ಧಿ ಪಡಿಸಲು ಈ ಸಮಾವೇಶದಲ್ಲಿ ಮಾಹಿತಿ ನೀಡಲಾಗುತ್ತಿದ್ದು, ಪ್ರತಿಯೊಬ್ಬರೂ ಭಾಗವಹಿಸಬೇಕು ಎಂದು ಕರೆ ನೀಡಿದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruSelf-EmploymentCommunity Event