BLR Today
ಶನಿವಾರ, ಅಕ್ಟೋಬರ್ 31, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru1 ಗಂಟೆಗಳ ಹಿಂದೆ

ಬೆಂಗಳೂರಿನಲ್ಲಿ ₹13.76 ಕೋಟಿ ಮೌಲ್ಯದ ಜಪ್ತಿ ಸ್ವತ್ತು ವಾರಸುದಾರರಿಗೆ ಹಸ್ತಾಂತರ

ಬೆಂಗಳೂರಿನಲ್ಲಿ ₹13.76 ಕೋಟಿ ಮೌಲ್ಯದ ಜಪ್ತಿ ಸ್ವತ್ತು ವಾರಸುದಾರರಿಗೆ ಹಸ್ತಾಂತರ
ಚಿತ್ರ: Prajavani

ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಶನಿವಾರ ಆರೋಪಿಗಳಿಂದ ವಶಕ್ಕೆ ಪಡೆದ ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರ ಮಾಡಿದರು. 257 ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 211 ಆರೋಪಿಗಳಿಂದ ಒಟ್ಟು ₹13.76 ಕೋಟಿಯ ಸ್ವತ್ತನ್ನು ಜಪ್ತಿ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಜಪ್ತಿ ಮಾಡಿದ ವಸ್ತುಗಳಲ್ಲಿ 8 ಕೆ.ಜಿ 269 ಗ್ರಾಂ ಆಭರಣ, 410 ಮೊಬೈಲ್‌ಗಳು, 175 ದ್ವಿಚಕ್ರ ವಾಹನಗಳು, ₹92 ಲಕ್ಷ ನಗದು, 18 ಕೆ.ಜಿ ಬೆಳ್ಳಿ ಆಭರಣ, 15 ಮೂರು ಚಕ್ರದ ವಾಹನಗಳು, ಒಂದು ಕ್ಯಾಂಟರ್‌, 343 ಕೆ.ಜಿ ಒಣ ಹಣ್ಣು, ಏಳು ವಾಹನಗಳು, 22 ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌, ಮೂರು ಲ್ಯಾಪ್‌ಟಾಪ್‌, 86 ಕೆ.ಜಿ ಕಾಪರ್ ವೈರ್ ಸೇರಿವೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruPoliceCrimeSeizureProperty Handover