ಸತೀಶ್ ಮತ್ತು ಟಂಕರ ಕೆಬಿಎ ಡೈಮಂಡ್ ಜುಬಿಲಿ ಇಂಡಿಯಾ ಇಂಟರ್‌ನ್ಯಾಷನಲ್ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್‌ಗೆ ಲಗ್ಗೆ
ಬೆಂಗಳೂರಿನ ಕೆಬಿಎ ಡೈಮಂಡ್ ಜುಬಿಲಿ ಇಂಡಿಯಾ ಇಂಟರ್‌ನ್ಯಾಷನಲ್ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ತಮಿಳುನಾಡಿನ ಸತೀಶ್ ಕರುಣಾಕರಣ್ ಮತ್ತು ತೆಲಂಗಾಣದ ಟಂಕರ ಜ್ಞಾನದತ್ತು ತಲಸಿಲ ಪುರುಷರ ಸಿಂಗಲ್ಸ್ ಫೈನಲ್‌ಗೆ ಲಗ್ಗೆ ಇಟ್ಟರು. ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕರುಣಾಕರಣ್ ಅವರು ಮೂರನೇ ಶ್ರೇಯಾಂಕ ಮಿಥುನ್ ಮಂಜುನಾಥ್ ಅವರಿಗೆ 21-17, 20-22, 22-20ರಿಂದ ಆಘಾತ ನೀಡಿದರು. ಟಂಕರ ಅವರು ನಾಲ್ಕನೇ ಶ್ರೇಯಾಂಕ ತುಷಾರ್ ಸುವೀರ್ ಅವರನ್ನು 23-21, 21-16 ಅಂತರದಿಂದ ಹಿಮ್ಮೆಟ್ಟಿಸಿದರು. ಮಹಿಳಾ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕ ಮಾನ್ಸಿ ಸಿಂಗ್ ಅವರು ದೆಹಲಿಯ ಡಯಾಂಕಾ ವಾಲ್ಡಿಯಾ ವಿರುದ್ಧ 21-16, 21-18ರಿಂದ ಸೋತರು. ಮಲೇಷ್ಯಾದ ಲೌ ಯಿ ಶೆಂಗ್ ಮತ್ತು ಲೀ ಯಿ ಬೊ ಜೋಡಿ ಥಾಯ್ಲೆಂಡ್‌ನ ವೀರಫಾತ್ ಫಕ್ಜಾರುಂಗ್ ಮತ್ತು ತನುಪತ್ ವಿರಿಯಂಗ್ಕುರಾ ವಿರುದ್ಧ ಗೆಲುವು ಸಾಧಿಸಿತು. ಭಾರತದ ಸಾಯಿ ಪ್ರತೀಕ್ ಕೆ. ಮತ್ತು ಆರ್. ರೆತಿನ ಸಭಾಪತಿ ಜೋಡಿ ಥಾಯ್ಲೆಂಡ್‌ನ ಫರಾನ್ಯು ಕಾವೊಸಮಾಂಗ್ ಮತ್ತು ಕಿಟ್ಟಿನುಪೊಂಗ್ ಕೆಡ್ರೆನ್ ವಿರುದ್ಧ ಗೆಲುವು ಸಾಧಿಸಿತು.


