BLR Today
ಸೋಮವಾರ, ನವೆಂಬರ್ 2, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru3 ಗಂಟೆಗಳ ಹಿಂದೆ

ಸತೀಶ್ ಮತ್ತು ಕೆತ್‌ಕ್ಲಿಯೆಂಗ್ ಕೆಬಿಎ ಡೈಮಂಡ್ ಜುಬಿಲಿ ಇಂಟರ್‌ನ್ಯಾಷನಲ್ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಚಾಂಪಿಯನ್‌ಗಳು

ಸತೀಶ್ ಮತ್ತು ಕೆತ್‌ಕ್ಲಿಯೆಂಗ್ ಕೆಬಿಎ ಡೈಮಂಡ್ ಜುಬಿಲಿ ಇಂಟರ್‌ನ್ಯಾಷನಲ್ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಚಾಂಪಿಯನ್‌ಗಳು
ಚಿತ್ರ: Prajavani

ತಮಿಳುನಾಡಿನ ಸತೀಶ್ ಕರುಣಾಕರನ್‌ ಅವರು ಕೆಬಿಎ ಡೈಮಂಡ್ ಜುಬಿಲಿ ಇಂಟರ್‌ನ್ಯಾಷನಲ್ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಪುರುಷರ ಸಿಂಗಲ್ಸ್‌ ಕಿರೀಟ ಮುಡಿಗೇರಿಸಿಕೊಂಡರು. ಭಾನುವಾರ ಮುಕ್ತಾಯವಾದ ಈ ಟೂರ್ನಿಯಲ್ಲಿ ಸತೀಶ್‌ 21–09, 23–21ರಿಂದ ನೇರ ಗೇಮ್‌ಗಳಲ್ಲಿ ತೆಲಂಗಾಣದ ಟಂಕರ ಜ್ಞಾನದತ್ತು ತಲಸಿಲ ಅವರನ್ನು ಸೋಲಿಸಿದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ಥಾಯ್ಲೆಂಡ್‌ನ ಯತವೀಮಿನ್‌ ಕೆತ್‌ಕ್ಲಿಯೆಂಗ್‌ ಅವರು ಚಾಂಪಿಯನ್‌ ಆದರು. ಪುರುಷರ ಡಬಲ್ಸ್‌ನಲ್ಲಿ ಸಾಯಿ ಪ್ರತೀಕ್‌ ಕೆ.– ರೂಬನ್‌ ಕೆ. ರೆಥಿನಸಭಾಪತಿ ಜೋಡಿ ಪ್ರಶಸ್ತಿಗೆ ಮುತ್ತಿಕ್ಕಿತು. ಸಾಯಿ ಮತ್ತು ರೂಬನ್‌ ಅವರು ಮಲೇಷ್ಯಾದ ಲಾವು ಯಿ ಶೆಂಗ್‌– ಲೀ ಯಿ ಬೊ ಜೋಡಿಯನ್ನು ಫೈನಲ್‌ನಲ್ಲಿ 21–15, 21–19ರಿಂದ ಮಣಿಸಿದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruSportsBadmintonKBATamil Nadu