ಸುರಪುರದಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿ ಮೆರವಣಿಗೆ ಆಯೋಜನೆ
ಸುರಪುರ ನಗರಸಭೆ ಮುಂದೆ ಸ್ಥಾಪಿಸಲು ಉದ್ದೇಶಿಸಿರುವ ಸಂಗೊಳ್ಳಿ ರಾಯಣ್ಣ ಕಂಚಿನ ಪುತ್ಥಳಿಯ ಮೆರವಣಿಗೆಯನ್ನು ಹಾಲುಮತ ಸಮಾಜದವರು ಬುಧವಾರ ಸಡಗರದಿಂದ ಆಯೋಜಿಸಿದ್ದರು. ತಾಲ್ಲೂಕಿನ ದೇವಪುರ ಕ್ರಾಸ್ನಲ್ಲಿ ಪುತ್ಥಳಿಗೆ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಾಯಿತು. ಅಲ್ಲಿಂದ ಕುಂಬಾರಪೇಟೆವರೆಗೆ ಡಿ.ಜೆಯೊಂದಿಗೆ ಮೆರವಣಿಗೆ ನಡೆಸಲಾಯಿತು. ಕುಂಬಾರಪೇಟೆಯಿಂದ ವಾಲ್ಮೀಕಿ ವೃತ್ತ, ವೇಣುಗೋಪಾಲಸ್ವಾಮಿ ದೇಗುಲ, ವಲ್ಲಭಭಾಯಿ ವೃತ್ತ, ಅರಮನೆ, ಗಾಂಧಿವೃತ್ತ ಮಾರ್ಗವಾಗಿ ನಗರಸಭೆ ಆವರಣದವರೆಗೆ ಮೆರವಣಿಗೆ ನಡೆಯಿತು. ಬೆಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆವರೆಗೆ ನಡೆದ ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ಎಲ್ಲರೂ ಭಂಡಾರದಲ್ಲಿ ಮಿಂದೆದ್ದರು. ಸಂಗೊಳ್ಳಿ ರಾಯಣ್ಣ ಅವರ ಬಗ್ಗೆ ಘೋಷಣೆಗಳು ಮುಗಿಲು ಮುಟ್ಟಿದ್ದವು.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruSurapuraSangolli RayannaProcessionCulture


