ಆರ್‌ಐಎಂ: 277 ಮಂದಿಗೆ ಪದವಿ ಪ್ರದಾನ
ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ (ಆರ್‌ಐಎಂ) 30ನೇ ವಾರ್ಷಿಕ ಘಟಿಕೋತ್ಸವದಲ್ಲಿ 277 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 251 ಪದವೀಧರರಿಗೆ ಪಿಜಿಡಿಎಂ, 19 ಮಂದಿಗೆ ಪಿಜಿಸಿಎಂ– ಪಿಜಿಪಿಬಿಎ ಪ್ರಮಾಣ ಪತ್ರ ಹಾಗೂ ಏಳು ಮಂದಿಗೆ ಪಿಜಿಡಿಎಂ ಆನ್‌ಲೈನ್ ಪ್ರಮಾಣ ಪತ್ರವನ್ನು ನೀಡಲಾಯಿತು. ‘ಜೀವನೋಪಾಯಕ್ಕಾಗಿ ಅಲ್ಲ, ಬದಲಾವಣೆಗಾಗಿ ಹೊರಡಿ. ಧೈರ್ಯ ದಿಂದ ಕನಸು ಕಾಣಿ, ಉದ್ದೇಶದಿಂದ ಕೆಲಸ ಮಾಡಿ, ಚಾರಿತ್ರ್ಯದಿಂದ ಬದುಕಿ’ ಎಂದು ನಾಗ್ಪುರದ ಐಐಎಂ ನಿರ್ದೇಶಕ ಭೀಮರಾಯ ಮೆಟ್ರಿ ಹೇಳಿದರು. ಆರ್‌ಐಎಂ ನಿರ್ದೇಶಕ, ಗೋಕುಲಎಜುಕೇಷನ್ ಫೌಂಡೇಷನ್ ಕಾರ್ಯ ದರ್ಶಿ ಎಂ.ಆರ್. ಆನಂದರಾವ್, ಮುಖ್ಯ ಶೈಕ್ಷಣಿಕ ಸಲಹೆಗಾರ ಡಾ. ಕರಿಸಿದ್ದಪ್ಪ, ಆರ್‌ಐಎಂ ಡೀನ್ ಡಾ. ಗೀತಾ ರಾಜಾರಾಂ, ರಿಜಿಸ್ಟ್ರಾರ್ ಡಾ. ಭಾನುಮತಿ, ಗೋಕುಲ ಎಜುಕೇಷನ್ ಫೌಂಡೇಷನ್ ಉಪಾಧ್ಯಕ್ಷ ಎಂ.ಆರ್. ಜಾನಕಿರಾಮ್, ಹಣಕಾಸು ಮುಖ್ಯಸ್ಥ ಜಿ. ರಾಮಚಂದ್ರ ಉಪಸ್ಥಿತರಿದ್ದರು.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruEducationRIM


