Bengaluru Today
ಮಂಗಳವಾರ, ಸೆಪ್ಟೆಂಬರ್ 22, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru3 ಗಂಟೆಗಳ ಹಿಂದೆ

ಟೊಯೊಟಾಗೆ ₹31.90 ಕೋಟಿ ಅನಗತ್ಯ ಆರ್ಥಿಕ ಲಾಭ ನೀಡಿದೆ ಎಂದು ವರದಿ

ಜಿಗಣಿಯಲ್ಲಿ 'ಟೊಯೊಟಾ ಇಂಡಸ್ಟ್ರೀಸ್ ಎಂಜಿನ್ ಇಂಡಿಯಾ' ಕಂಪನಿಗೆ ಭೂಮಿ ಹಂಚಿಕೆ ಮಾಡುವ ಸಂದರ್ಭದಲ್ಲಿ ಕೆಐಎಡಿಬಿ ₹31.90 ಕೋಟಿ ಅನಗತ್ಯ ಆರ್ಥಿಕ ಲಾಭ ಮಾಡಿಕೊಟ್ಟಿದೆ ಎಂದು ಮಹಾಲೇಖಪಾಲರ ವರದಿ ಹೇಳಿದೆ. ರಸ್ತೆಗೆ ಬಳಕೆ ಮಾಡಿದ ಭೂಮಿಗೆ ಸಂಬಂಧಿಸಿದ ಪರಿಹಾರ ಮತ್ತು ಸೇವಾ ಶುಲ್ಕವಾಗಿ ಪಾವತಿಸಬೇಕಿದ್ದ ₹27.07 ಕೋಟಿಯನ್ನು ಕೆಐಎಡಿಬಿ ಮನ್ನಾ ಮಾಡಿದೆ. ಅಲ್ಲದೆ, ಸೇವಾ ಶುಲ್ಕವನ್ನು ಶೇ 12ರಿಂದ ಶೇ 6ಕ್ಕೆ ಇಳಿಸುವ ಮೂಲಕ ಕಂಪನಿಗೆ ಹೆಚ್ಚುವರಿಯಾಗಿ ₹4.83 ಕೋಟಿ ಲಾಭವನ್ನು ಮಾಡಿಕೊಟ್ಟಿದೆ ಎಂಬುದು ವರದಿಯಲ್ಲಿದೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
ToyotaKIADBJiganiBengaluru