BLR Today
ಬುಧವಾರ, ನವೆಂಬರ್ 4, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru9 ಗಂಟೆಗಳ ಹಿಂದೆ

ಬೆಂಗಳೂರಿನ ಅಪೊಲೊ ಆಸ್ಪತ್ರೆಯಲ್ಲಿ ಅಪರೂಪದ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿ

ಬೆಂಗಳೂರಿನ ಅಪೊಲೊ ಆಸ್ಪತ್ರೆಯಲ್ಲಿ ಅಪರೂಪದ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿ
ಚಿತ್ರ: Prajavani

ಬೆಂಗಳೂರಿನ ಅಪೊಲೊ ಆಸ್ಪತ್ರೆಯ ವೈದ್ಯರು ಹೃದಯದ ಕವಾಟದಲ್ಲಿ ರಕ್ತ ಸೋರಿಕೆಯಿಂದಾಗಿ ಹೃದಯ ವೈಫಲ್ಯಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬರಿಗೆ ಅಪರೂಪದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ರೋಗಿಗೆ ಹುಟ್ಟಿನಿಂದಲೇ ಕವಾಟದಲ್ಲಿ ದೋಷವಿತ್ತು. ಮೂಲ ಕವಾಟವನ್ನು ತೆಗೆದು ಹೊಸದನ್ನು ಜೋಡಿಸುವ ಬದಲು, ಇದ್ದ ಕವಾಟನ್ನೇ ಯಶಸ್ವಿಯಾಗಿ ಸರಿಪಡಿಸಿ ಜೋಡಿಸಲಾಗಿದೆ. ಶಸ್ತ್ರಚಿಕಿತ್ಸೆಯ ಬಗ್ಗೆ ಮಾತನಾಡಿರುವ ಡಾ.ನಿರಂಜನ್ ಹಿರೇಮಠ್ ಅವರು, 'ರೋಗಿಯ ಹೃದಯದ ಕವಾಟವನ್ನು ಉಳಿಸಿಕೊಳ್ಳುವುದು ಹೆಚ್ಚು ಪ್ರಯೋಜನಕಾರಿ. ಕವಾಟ ಬದಲಾವಣೆಯಿಂದ ಎದುರಾಗಬಹುದಾದ ದೀರ್ಘಾವಧಿಯ ಸಮಸ್ಯೆಗಳಿಂದ ಪಾರಾಗಲು ಇದು ನೆರವಾಗುತ್ತದೆ. ಸದ್ಯ ರೋಗಿಯ ಹೃದಯದ ಕಾರ್ಯಕ್ಷಮತೆ ಸುಧಾರಿಸಿರುವುದು ತೃಪ್ತಿ ತಂದಿದೆ' ಎಂದಿದ್ದಾರೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
Apollo HospitalBengaluruHeart SurgeryMedical News