BLR Today
ಶನಿವಾರ, ಅಕ್ಟೋಬರ್ 24, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru1 ಗಂಟೆಗಳ ಹಿಂದೆ

ಹೊಸೂರಿನವರೆಗೆ ನಮ್ಮ ಮೆಟ್ರೋ ಹಳದಿ ಲೈನ್ ವಿಸ್ತರಣೆಗೆ ಪ್ರತಿಭಟನೆ, ರಾಜ್ಯದ ಸಂಪರ್ಕದ ಬಗ್ಗೆ ಆತಂಕ ವ್ಯಕ್ತವಾಗಿದೆ

ಹೊಸೂರಿನವರೆಗೆ ನಮ್ಮ ಮೆಟ್ರೋ ಹಳದಿ ಲೈನ್ ವಿಸ್ತರಣೆಗೆ ಪ್ರತಿಭಟನೆ, ರಾಜ್ಯದ ಸಂಪರ್ಕದ ಬಗ್ಗೆ ಆತಂಕ ವ್ಯಕ್ತವಾಗಿದೆ
ಚಿತ್ರ: Asianet Suvarna News

ನಮ್ಮ ಮೆಟ್ರೋ ಹಳದಿ ಲೈನ್ ಅನ್ನು ಬೊಮ್ಮಸಂದ್ರದಿಂದ ಅತ್ತಿಬೆಲೆವರೆಗೆ ವಿಸ್ತರಿಸುವ ಪ್ರಸ್ತಾವನೆಗೆ ಕನ್ನಡ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪ್ರಸ್ತುತ ಆರ್ ವಿ ರಸ್ತೆ ಯಿಂದ ಬೊಮ್ಮಸಂದ್ರದವರೆಗೆ ಸಂಪರ್ಕ ಕಲ್ಪಿಸುವ ಈ ಹಳದಿ ಮಾರ್ಗವನ್ನು ಬೊಮ್ಮಸಂದ್ರದಿಂದ ಅತ್ತಿಬೆಲೆವರೆಗೆ ಸುಮಾರು 10 ಕಿ.ಮೀ ವರೆಗೆ ವಿಸ್ತರಿಸಲು ಪ್ರಸ್ತಾವನೆ ಇದೆ. ಈ ವಿಸ್ತರಣೆಯ ಕುರಿತು ಕನ್ನಡಪರ ಹೋರಾಟಗಾರರಾದ ವಾಟಾಳ್ ನಾಗರಾಜ್ ಮತ್ತು ಕರವೇ ಮುಖಂಡ ಪ್ರವೀಣ್ ಶೆಟ್ಟಿ ಸೇರಿದಂತೆ ಇತರ ಕನ್ನಡಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಮೂಲ ವರದಿ: Asianet Suvarna News ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
Namma MetroBengaluruProtestYellow Line