ಬೆಂಗಳೂರಿನಲ್ಲಿ ನಟಿ ಪ್ರೇಮಾಗೆ ಕೊಲೆ ಬೆದರಿಕೆ: ನಿರ್ಮಾಪಕ ಬಂಧನ
ನಟಿ ಪ್ರೇಮಾ ಅವರ ಮನೆಗೆ ನುಗ್ಗಿ, ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ನಿರ್ಮಾಪಕ ಹಾಗೂ ನಿರ್ಮಾಪಕರ ಸಂಘದ ಉಪಾಧ್ಯಕ್ಷ ಎಚ್.ಸಿ. ಶ್ರೀನಿವಾಸ್ ಅಲಿಯಾಸ್ ಶಿಲ್ಪ ಶ್ರೀನಿವಾಸ್ ಅವರನ್ನು ಪೊಲೀಸರು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಬೆಳಗಾಗುತ್ತಿದ್ದಂತೆಯೆ ನಡೆದ ಈ ಘಟನೆಯಿಂದಾಗಿ ಕನ್ನಡ ಚಿತ್ರರಂಗ ತತ್ತರಕ್ಕೊಳಗಾಗಿದೆ. 'ಪರ್ವ' ಚಿತ್ರಕ್ಕೆ ಮತ್ತಷ್ಟು ದಿನದ ಕಾಲ್‌ಶೀಟ್ ನೀಡುವಂತೆ ಒತ್ತಾಯಿಸಿ ನಿರ್ಮಾಪಕ ಶ್ರೀನಿವಾಸ್, ದಾಂಧಲೆ ನಡೆಸಿ, ಪ್ರೇಮಾ ಅವರ ಇಡೀ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruCrimeEntertainment


