ಬೆಂಗಳೂರಿನ ಹಲವೆಡೆ ಇಂದು ವಿದ್ಯುತ್ ವ್ಯತ್ಯಯ; ಬೆಳಗ್ಗೆ 10 ರಿಂದ ಸಂಜೆ 5 ರ ವರೆಗೆ ಪವರ್ ಕಟ್
ಕೆಪಿಟಿಸಿಎಲ್ ಮತ್ತು ಬೆಸ್ಕಾಂ ವತಿಯಿಂದ ವಿವಿಧ ಉಪಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನ.26 ರಂದು ಗುರುವಾರ ನಗರದ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ರಾಜಾಜಿನಗರದ 1ರಿಂದ 6ನೇ ಬ್ಲಾಕ್, ಮಂಜುನಾಥನಗರ, ಶಿವನಗರ, ಅಗ್ರಹಾರ ದಾಸರಹಳ್ಳಿ, ಪ್ರಕಾಶನಗರ, ಗಾಯತ್ರಿನಗರ, ಸುಬ್ರಮಣ್ಯನಗರ, ಎಲ್ .ಎನ್ .ಪುರ, ರಾಜ್ ಕುಮಾರ್ ರಸ್ತೆ, ಪ್ಯಾಲೇಸ್ ಗುಟ್ಟಹಳ್ಳಿ, ಮಲ್ಲೇಶ್ವರಂ, ವೆಸ್ಟ್ ಆಫ್ ಕಾರ್ಡ್ ರಸ್ತೆ, ವಿಜಯನಗರ, ಹಂಪಿನಗರ, ಹೊಸಹಳ್ಳಿ, ಬಿನ್ನಿಪೇಟೆ, ಗೋಪಾಲಪುರ, ಗೋರಿಪಾಳ್ಯ, ಭುವನೇಶ್ವರಿನಗರ, ಆರ್ . ಬ್ಲಾಕ್ , ನಿರ್ಮಾಣ್ ಭವನ್ , ಕೆಎರ್ ಡಿಸಿಎಲ್ , ಜೆಟ್ ಲಾಗ್ , ನಾರಾಯಣ ನೇತ್ರಾಲಯ, ಇಸ್ಕಾನ್ ದೇವಸ್ಥಾನ, ದೇವಯ್ಯ ಪಾರ್ಕ್ , ಕೆಎಚ್ ಬಿ ಕಾಲೋನಿ ಸುತ್ತಮುತ್ತ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಮತ್ತಿಕೆರೆ, ಯಶವಂತಪುರ, ಸಹಕಾರನಗರ, ಜಕ್ಕೂರು, ಜಯನಗರ, ಬನ್ನೇರುಘಟ್ಟ ರಸ್ತೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.
ಮೂಲ ವರದಿ: Asianet Suvarna News
ಸಾರ್ವಜನಿಕ ಸುದ್ದಿ ಫೀಡ್ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruBESCOMKPTCLPower CutAdvisory


