Post Office Services Unavailable in Several Bengaluru Post Offices from the 22nd to 25th
ಹೊಸ ತಂತ್ರಾಂಶ ಅಳವಡಿಸುತ್ತಿರುವ ಕಾರಣ, ಬೆಂಗಳೂರಿನ ಅಂಚೆ ಕಚೇರಿಗಳಲ್ಲಿ ಪಿಎಲ್ಐ ಮತ್ತು ಆರ್ ಪಿಎಲ್ ಐಗೆ ಸಂಬಂಧಿಸಿದ ಕೆಲವು ಸೇವೆಗಳು ಅ.22ರಿಂದ 25ರವರೆಗೆ ಲಭ್ಯವಿರುವುದಿಲ್ಲ. ಜಿಪಿಒ ಮುಖ್ಯ ಅಂಚೆಪಾಲರು ತಿಳಿಸಿದಂತೆ, ಜಿಪಿಒ ಮತ್ತು ಅದರ ವ್ಯಾಪ್ತಿಯ ಅರೇಬಿಕ್ ಕಾಲೇಜು, ಬಾಣಸವಾಡಿ, ಸಿಎಂಎಂ ಕೋರ್ಟ್ ಕಾಂಪ್ಲೆಕ್ಸ್, ಫ್ರೇಸರ್ ಟೌನ್, ಹೈಕೋರ್ಟ್, ಎಚ್ ಕೆಪಿ ರಸ್ತೆ, ಹೊರಮಾವು, ಜಲವಾಯು ವಿಹಾರ್, ಕಲ್ಯಾಣ ನಗರ, ಕೊತ್ತನೂರು, ಲೆಜಿಸ್ಲಚರ್ಸ್ ಹೋಮ್, ಲಿಂಗರಾಜಪುರಂ, ಮಾರುತಿ ಸೇವಾ ನಗರ, ಮ್ಯೂಸಿಯಂ ರಸ್ತೆ, ರಾಜಭವನ, ಶಿವನ್ ಚಟ್ಟಿ ಗಾರ್ಡನ್ಸ್, ಸೇಂಟ್ ಥಾಮಸ್ ಟೌನ್, ವಸಂತನಗರ, ವಿಧಾನಸೌಧ ಅಂಚೆ ಕಚೇರಿಗಳಲ್ಲಿ ಪ್ರೀಮಿಯಂ ಸಂಗ್ರಹಣೆ, ಸಾಲದ ಪ್ರೀಮಿಯಂ ಸಂಗ್ರಹಣೆ, ಸಾಲ ಮರು ಪಾವತಿ ಪ್ರಕ್ರಿಯೆ ಮತ್ತು ಗ್ರಾಹಕರ ಸೇವೆಗೆ ಸಂಬಂಧಿಸಿದ ಸೇವೆಗಳು ಲಭ್ಯವಿರುವುದಿಲ್ಲ. ಆದರೆ, ಬೆಂಗಳೂರು ಜಿಪಿಒ ಹೊರತುಪಡಿಸಿ ಬೇರೆ ಕಚೇರಿಗಳಿಂದ ಪಾಲಿಸಿಗಳನ್ನು ಪಡೆದವರ ಪಾಲಿಸಿದಾರರು ಈ ಅವಧಿಯಲ್ಲಿ ಆನ್‌ಲೈನ್ ಮೂಲಕ ಅಥವಾ ಇತರ ಮುಖ್ಯ ಅಂಚೆ ಕಚೇರಿಗಳಲ್ಲಿ ತಮ್ಮ ಪ್ರೀಮಿಯಂ ಪಾವತಿಸುವುದನ್ನು ಮುಂದುವರಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


