BLR Today
ಬುಧವಾರ, ಅಕ್ಟೋಬರ್ 28, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru3 ಗಂಟೆಗಳ ಹಿಂದೆ

ಬೆಂಗಳೂರು ಪೊಲೀಸರು ಸ್ವಯಂ ಸೇವಕ ಗೃಹರಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು ಪೊಲೀಸರು ಸ್ವಯಂ ಸೇವಕ ಗೃಹರಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಚಿತ್ರ: Prajavani

ಜಿಲ್ಲೆಯ ಗೃಹರಕ್ಷಕ ದಳವು ಜಿಲ್ಲೆಯಲ್ಲಿ ಖಾಲಿ ಇರುವ ಸ್ವಯಂ ಸೇವಕ ಗೃಹರಕ್ಷಕರ ಸ್ಥಾನಗಳಿಗೆ ಅರ್ಜಿ ಆಹ್ವಾನಿಸಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಉತ್ತೀರ್ಣರಾದ 19ರಿಂದ 50 ವರ್ಷದೊಳಗಿನ, ದೈಹಿಕವಾಗಿ ಸದೃಢರಾಗಿರುವ ಅಭ್ಯರ್ಥಿಗಳು, ಅರ್ಜಿಗಳನ್ನು ನವೆಂಬರ್ 7ರೊಳಗೆ ಗೃಹರಕ್ಷಕ ದಳದ ಕಚೇರಿ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಅಗ್ನಿಶಾಮಕ ಠಾಣೆ ಪಕ್ಕ, ರಾಜಾಜಿನಗರ– ಇಲ್ಲಿ ಪಡೆದು ಜನ್ಮ ದಿನಾಂಕ ನಮೂದಿಸಿರುವ ಶಾಲಾ ವರ್ಗಾವಣೆ ಪತ್ರ ಮತ್ತು ಅಂಕಪಟ್ಟಿ, ವಾಸಸ್ಥಳ ದೃಢೀಕರಣ ಪತ್ರದ ಜೊತೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ. 080 23142542 ಸಂಪರ್ಕಿಸಬಹುದು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruPoliceRecruitment