BLR Today
ಗುರುವಾರ, ಅಕ್ಟೋಬರ್ 22, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru2 ಗಂಟೆಗಳ ಹಿಂದೆ

ಪೊಲೀಸರು ಅವ್ರ ಡ್ಯೂಟಿ ಮಾಡಿದ್ದಾರೆ, ಅದರಲ್ಲಿ ತಪ್ಪೇನಿದೆ: ಡಿಸಿಎಂ ರಿಯಾಕ್ಷನ್‌

ಪೊಲೀಸರು ಅವ್ರ ಡ್ಯೂಟಿ ಮಾಡಿದ್ದಾರೆ, ಅದರಲ್ಲಿ ತಪ್ಪೇನಿದೆ: ಡಿಸಿಎಂ ರಿಯಾಕ್ಷನ್‌
ಚಿತ್ರ: Public TV

ದಸರಾ ಸಂದರ್ಭದಲ್ಲಿ ಮುಖ್ಯಮಂತ್ರಿಗಳೊಂದಿಗೆ ನಂದಿಧ್ವಜ ಪೂಜೆಗೆ ತೆರಳುತ್ತಿದ್ದ ಸಚಿವರನ್ನು ಎಸ್‌ಪಿ ತಡೆದ ಘಟನೆಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್‌ ಪ್ರತಿಕ್ರಿಯಿಸಿ, ಮೇಲಾಧಿಕಾರಿಗಳ ಸೂಚನೆ ಪೊಲೀಸರು ಪಾಲಿಸಿರುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಸಿಎಂ ವಿಚಾರದಲ್ಲಿ ಕೆಲವೊಂದು ಶಿಷ್ಟಾಚಾರ ಇರುತ್ತೆ, ಅದನ್ನ ಪಾಲಿಸಬೇಕಾಗುತ್ತೆ ಎಂದೂ ಅವರು ಹೇಳಿದ್ದಾರೆ. ಮೈಸೂರು ದಸರಾ ಸಂದರ್ಭದ ಘಟನೆಗಳಿಗೆ ಜಾತಿ ಬಣ್ಣ ಹಚ್ಚುವುದು ಕೀಳುಮಟ್ಟದ ಆಲೋಚನೆಯಾಗಿದೆ ಎಂದೂ ಅವರು ಹೇಳಿದ್ದಾರೆ.

ಮೂಲ ವರದಿ: Public TV ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.