BLR Today
ಶುಕ್ರವಾರ, ನವೆಂಬರ್ 27, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru4 ದಿನಗಳ ಹಿಂದೆ

ಬೆಂಗಳೂರಿನಲ್ಲಿ 149 ರೌಡಿಗಳ ಮನೆಗಳ ಮೇಲೆ ಪೊಲೀಸರ ಜಂಟಿ ದಾಳಿ

ಬೆಂಗಳೂರಿನಲ್ಲಿ 149 ರೌಡಿಗಳ ಮನೆಗಳ ಮೇಲೆ ಪೊಲೀಸರ ಜಂಟಿ ದಾಳಿ
ಚಿತ್ರ: Prajavani

ರೌಡಿ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೂಚನೆ ನೀಡಿದ ಬೆನ್ನಲ್ಲೇ ನಗರ ಪೊಲೀಸರು ಭಾನುವಾರ ನಸುಕಿನಲ್ಲಿ 149 ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ, ಶೋಧ ನಡೆಸಿದರು. ಪೂರ್ವ, ಪಶ್ಚಿಮ, ಈಶಾನ್ಯ, ಉತ್ತರ, ದಕ್ಷಿಣ ಹಾಗೂ ಕೇಂದ್ರ ವಿಭಾಗದ ಪೊಲೀಸ್ ಠಾಣೆಗಳ ವ್ಯಾಪ್ತಿಯ ಯಲಹಂಕ, ಸಂಪಿಗೆಹಳ್ಳಿ, ಬಾಗಲೂರು, ಕೊಡಿಗೇಹಳ್ಳಿ, ಕೊತ್ತನೂರು, ಗಾಂಧಿ ನಗರ ವಿಭಾಗದ ರೌಡಿಗಳ ಮನೆಗಳಿಗೆ ಏಕಕಾಲಕ್ಕೆ ದಾಂಗುಡಿಯಿಟ್ಟಿ ಪೊಲೀಸರು, ಇಂಚಿಂಚೂ ಶೋಧ ನಡೆಸಿದರು. ಪೊಲೀಸರು ರೌಡಿಗಳ ಮನೆ ಬಾಗಿಲು ತಟ್ಟಿ, ಅವರನ್ನು ಹೊರಗೆ ಕರೆತಂದು ವಿಚಾರಣೆ ನಡೆಸಿದರು. ಅವರ ಮನೆಯನ್ನು ಜಾಲಾಡಿದ ಪೊಲೀಸರು, ಪೂರ್ವಾಪರ, ಆದಾಯದ ಮೂಲ, ಅಪರಾಧ ಹಿನ್ನೆಲೆ, ಪ್ರಸ್ತುತ ಮಾಡುತ್ತಿರುವ ಕೆಲಸ, ಅವರ ವಿರುದ್ಧ ಈಗಾಗಲೇ ದಾಖಲಾಗಿರುವ ಅಪರಾಧ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruPoliceCrimeLaw Enforcement