BLR Today
ಶುಕ್ರವಾರ, ನವೆಂಬರ್ 27, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru7 ದಿನಗಳ ಹಿಂದೆ

ಬೆಂಗಳೂರಿನಲ್ಲಿ ಚಿತ್ರ ಪ್ರದರ್ಶನಕ್ಕೆ ಶೇಕಡಾವಾರು ಪದ್ಧತಿ ಜಾರಿ

ಬೆಂಗಳೂರಿನಲ್ಲಿ ಚಿತ್ರ ಪ್ರದರ್ಶನಕ್ಕೆ ಶೇಕಡಾವಾರು ಪದ್ಧತಿ ಜಾರಿ
ಚಿತ್ರ: Prajavani

ರಾಜ್ಯದ ಸುಮಾರು 402 ಚಿತ್ರಮಂದಿರಗಳಲ್ಲಿ ಬಾಡಿಗೆ ಪದ್ಧತಿಯ ಬದಲಾಗಿ ಶೇಕಡಾ ವಾರು ವ್ಯವಸ್ಥೆಯಲ್ಲಿ ಚಲನಚಿತ್ರ ಪ್ರದರ್ಶನವಾಗಲಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ತಿಳಿಸಿದರು. ಚಿತ್ರಮಂದಿರಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶೇಕಡಾವಾರು ವ್ಯವಸ್ಥೆ ಜಾರಿಗೆ ಕರ್ನಾಟಕ ಚಿತ್ರ ಪ್ರದರ್ಶಕರ ಸಂಘವು ಪತ್ರ ಮುಖೇನ ಮನವಿ ಸಲ್ಲಿಸಿತ್ತು. ಉದ್ಯಮದ ಎಲ್ಲಾ ವಿಭಾಗಗಳ ಪ್ರತಿನಿಧಿಗಳನ್ನು ಆಹ್ವಾನಿಸಿ ಸಭೆ ನಡೆಸಿ‌ದೆವು. ಇದರಲ್ಲಿ ಶೇಕಡಾವಾರು ಪದ್ಧತಿ ಜಾರಿ ಬಗ್ಗೆ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು. ಚಿತ್ರದ ಗಳಿಕೆಯ ಮೊತ್ತದಿಂದ ಎಷ್ಟು ಶೇಕಡಾ ಹಂಚಿಕೆ ಎಂಬುದನ್ನು ಸಂಬಂಧಪಟ್ಟ ನಿರ್ಮಾಪಕರು, ವಿತರ ಕರು, ಪ್ರದರ್ಶಕರು ಪರಸ್ಪರ ಕರಾರು ಪತ್ರದ ಮೂಲಕ ನಿರ್ಧರಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruCinemaFilm IndustryCulture