BLR Today
ಗುರುವಾರ, ನವೆಂಬರ್ 5, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru4 ಗಂಟೆಗಳ ಹಿಂದೆ

ಪೀಸ್ ಆಟೋ ರಾಜ್ಯೋತ್ಸವದ ಜೊತೆಗೆ 'ಚಾಲಕರ ದಿನ' ಆಚರಿಸುತ್ತದೆ

ಪೀಸ್ ಆಟೋ ರಾಜ್ಯೋತ್ಸವದ ಜೊತೆಗೆ 'ಚಾಲಕರ ದಿನ' ಆಚರಿಸುತ್ತದೆ
ಚಿತ್ರ: Prajavani

ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿರುವ ರಾಜೀವ್‌ ಗಾಂಧಿ ಒಳಾಂಗಣ ಕ್ರೀಡಾಂಗಣ ಮತ್ತು ಆಟದ ಮೈದಾನದಲ್ಲಿ ಕರ್ನಾಟಕ ರಾಜ್ಯೋತ್ಸವ ಮತ್ತು ಚಾಲಕರ ದಿನಾಚರಣೆಗಾಗಿ ಕಾರ್ಯಕ್ರಮ ವೇದಿಕೆ ಸಿದ್ಧವಾಗುತ್ತಿದೆ. ಶಂಕರ್ ನಾಗ್‌ ಜನ್ಮದಿನವನ್ನು ಚಾಲಕರ ದಿನವನ್ನಾಗಿ ಆಚರಿಸಬೇಕು ಎಂಬುದು ಚಾಲಕ ಸಂಘಟನೆಗಳ ಬಹುದಿನದ ಬೇಡಿಕೆ. ಈ ಸಂಬಂಧ ಹಲವು ವರ್ಷಗಳಿಂದ ಮನವಿ ಸಲ್ಲಿಸಲಾಗುತ್ತಿದರೂ, ಆಶಯ ಈಡೇರಿಲ್ಲ. ಹೀಗಾಗಿ, ‘ಪೀಸ್ ಆಟೋ’ ಸಂಘಟನೆ ವತಿಯಿಂದ ರಾಜ್ಯೋತ್ಸವದ ಜೊತೆಗೆ ‘ಚಾಲಕರ ದಿನ’ ಆಚರಿಸಲಾಗುತ್ತಿದೆ. ಈ ವರ್ಷ ನವೆಂಬರ್ 15ರಂದು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruBTM LayoutAuto DriversRajyotsavaShankar Nag