ಪರಿಕ್ರಮ ಚಾಂಪಿಯನ್ಸ್ ಲೀಗ್ ಫುಟ್‌ಬಾಲ್ ಟೂರ್ನಿ 25ರಿಂದ ಆರಂಭ
14ನೇ ಆವೃತ್ತಿಯ ಪರಿಕ್ರಮ ಚಾಂಪಿಯನ್ಸ್ ಲೀಗ್ (PCL) ಫುಟ್‌ಬಾಲ್ ಟೂರ್ನಿ ಇದೇ 25 ರಂದು ಆರಂಭವಾಗಲಿದೆ. ದೇಶದ ವಿವಿಧ ಭಾಗಗಳ ತಂಡಗಳು ‘ಸಮಾನತೆ ಕಪ್’ಗಾಗಿ ಸೆಣಸಲಿವೆ. ಸುಮಾರು 20 ತಂಡಗಳು ಸ್ಪರ್ಧಿಸುವ ನಿರೀಕ್ಷೆ ಇದೆ. ಸದ್ಯ 12 ತಂಡಗಳು ಭಾಗವಹಿಸುವಿಕೆಯನ್ನು ಖಚಿತಪಡಿಸಿವೆ ಎಂದು ಪರಿಕ್ರಮ ಹ್ಯುಮಾನಿಟಿ ಫೌಂಡೇಶನ್ ಪ್ರಕಟಣೆಯಲ್ಲಿ ತಿಳಿಸಿದೆ. ಮೂರು ದಿನಗಳ ಈ ಟೂರ್ನಿ ಯಲಹಂಕ ಸಮೀಪದ ‘ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್’ನಲ್ಲಿ ನಡೆಯಲಿದೆ. ತಂಡವನ್ನು ನೋಂದಾಯಿಸಲು ಫೌಂಡೇಶನ್‌ನ ಸಂಯೋಜಕರಾದ ಅನುಷಾ ಜೈನ್ (ಮೊ. 8197292825) ಅವರನ್ನು ಸಂಪರ್ಕಿಸಬಹುದು. ನೋಂದಣಿಗೆ ಕೊನೆಯ ದಿನಾಂಕ ನವೆಂಬರ್ 10. ಹೆಚ್ಚಿನ ಮಾಹಿತಿಗೆ https://parikrmafoundation.org/ಗೆ ಭೇಟಿ ನೀಡಿ.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruFootballSportsYelahanka


