BLR Today
ಗುರುವಾರ, ನವೆಂಬರ್ 19, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಹಬ್ಬದ ಸುದ್ದಿBengaluru2 ದಿನಗಳ ಹಿಂದೆ

ಹೆಬ್ಬಾಳದ ಜೆಕೆವಿಕೆ ಕೃಷಿ ಮೇಳದಲ್ಲಿ ಪಂಚಕಲ್ಯಾಣಿ ಎಮ್ಮೆ ಗಮನ ಸೆಳೆಯಿತು

ಹೆಬ್ಬಾಳದ ಜೆಕೆವಿಕೆ ಕೃಷಿ ಮೇಳದಲ್ಲಿ ಪಂಚಕಲ್ಯಾಣಿ ಎಮ್ಮೆ ಗಮನ ಸೆಳೆಯಿತು
ಚಿತ್ರ: Prajavani

ಹೆಬ್ಬಾಳದ ಜೆಕೆವಿಕೆ ಕೃಷಿ ಮೇಳದಲ್ಲಿ ವಿವಿಧ ತಳಿಯ ಹಸು ಮತ್ತು ಹೋರಿಗಳು, ವಿಶೇಷ ಗಾತ್ರದ ಎಮ್ಮೆ, ಸೆಲ್ಫಿ ಮತ್ತು ಫೊಟೊಗಾಗಿ ಮುಗಿಬಿದ್ದ ಜನರು ಕಂಡುಬಂದರು. ಈ ವರ್ಷದ ಕೃಷಿ ಮೇಳದ ವಿಶೇಷ ಆಕರ್ಷಣೆಯೆಂದರೆ ಪಂಚಕಲ್ಯಾಣಿ (ಜಾಫ್ರಾಬಾದಿ) ಎಮ್ಮೆ. ಗಾತ್ರದಲ್ಲಿ ಸಾಮಾನ್ಯ ಎಮ್ಮೆಗಳಿಗಿಂತ ದೊಡ್ಡದಾದ ಪಂಚಕಲ್ಯಾಣಿಯು ಕಪ್ಪು ಬಣ್ಣದ ದೇಹ, ಬಿಳಿ ಬಣ್ಣದ ಹಣೆ ಮತ್ತು ಕಾಲುಗಳು, ವಿಶೇಷ ಆಕಾರದ ಕೊಂಬಿನಿಂದ ಗಮನ ಸೆಳೆಯುತ್ತಿದೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruAgricultureCattleHebbalJKVK