ಆಪರೇಷನ್ ಸೈಬರ್ ಶೀಲ್ಡ್: ಬೆಂಗಳೂರಿನಲ್ಲಿ ಅಕ್ರಮ ಸಿಮ್ ಕಾರ್ಡ್ ಮಾರಾಟಗಾರರಿಗೆ ಖಾಕಿ ಶಾಕ್! 5 ಏಜೆನ್ಸಿಗಳ ವಿರುದ್ದ FIR
ಸೈಬರ್ ವಂಚಕರಿಗೆ ಅಕ್ರಮವಾಗಿ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡಿ ವಂಚನೆಗೆ ಪರೋಕ್ಷವಾಗಿ ಸಹಕರಿಸುತ್ತಿದ್ದ ಜಾಲವನ್ನು ಮಟ್ಟಹಾಕಲು ಆಪರೇಷನ್ ಸೈಬರ್ ಶೀಲ್ಡ್ ಹೆಸರಿನಲ್ಲಿ ಬೆಂಗಳೂರು ಸೈಬರ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. NCRP ದತ್ತಾಂಶ ಆಧರಿಸಿ ನಡೆಸಿದ ತನಿಖೆಯಲ್ಲಿ, ಹೊರರಾಜ್ಯಗಳಲ್ಲಿ ನಡೆದ ಸೈಬರ್ ಅಪರಾಧಗಳಿಗೆ ಬೆಂಗಳೂರಿನಿಂದ ಆಕ್ಟಿವೇಟ್ ಮಾಡಲಾದ 45ಕ್ಕೂ ಹೆಚ್ಚು ಸಿಮ್‌ಗಳು ಬಳಕೆಯಾಗಿರುವುದು ಪತ್ತೆಯಾಗಿದೆ. ಈ ಸಂಬಂಧ ಕುರುಬರಹಳ್ಳಿ ಮತ್ತು ಆರ್.ಟಿ.ನಗರದ ಪ್ರಮುಖ ಏಜೆನ್ಸಿಗಳು ಸೇರಿದಂತೆ ಒಟ್ಟು 5 ಕಡೆ ದಾಳಿ ಕಾರ್ಯಚರಣೆ ನಡೆಸಿ FIR ದಾಖಲಿಸಲಾಗಿದೆ.
ಮೂಲ ವರದಿ: Vijaya Karnataka
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruCyber CrimePolice OperationSIM Card Fraud


