BLR Today
ಶನಿವಾರ, ಅಕ್ಟೋಬರ್ 24, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ರಾಜಕೀಯBengaluru2 ಗಂಟೆಗಳ ಹಿಂದೆ

ಯತೀಂದ್ರ ಸಿದ್ದರಾಮಯ್ಯನ ಆರೋಪದ ನಂತರ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಅವರಿಗೆ ನೋಟಿಸ್

ಯತೀಂದ್ರ ಸಿದ್ದರಾಮಯ್ಯನ ಆರೋಪದ ನಂತರ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಅವರಿಗೆ ನೋಟಿಸ್
ಚಿತ್ರ: Kannada Prabha

ಸಿದ್ದರಾಮಯ್ಯನನ್ನ ಬ್ಲ್ಯಾಕ್ ಮೇಲ್ ಮಾಡಲು ಸ್ಟಿಂಗ್ ಆಪರೇಷನ್ ಮಾಡಿದ್ದು, ಕಾಂಗ್ರೆಸ್ನವರ ಕೈವಾಡವಿದೆ ಎಂದು ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್ ಮಹಿಳಾ ನಾಯಕಿ ಕೃಪಾ ಆಳ್ವಾಗೆ ನೋಟಿಸ್ ನೀಡಲಾಗಿದೆ. ಸ್ಟಿಂಗ್ ಆಪರೇಷನ್ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಆರೋಪದ ಬಗ್ಗೆ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು, 'ನಾನು ಈಗಾಗಲೇ ಹೇಳಿದ್ದೇನೆ, ಸೇಡಿನ ರಾಜಕೀಯವಾಗಿ ಸೇಡು ತೀರಿಸಿಕೊಳ್ಳೋಕೆ ಕೆಲವರು ಮಾಡುವ ಹೀನ ಕೃತ್ಯ ಇದು. ಅದು ಆಗಬಾರದು ಅಂತ ನಾನು ನಿರಂತರವಾಗಿ ಹೇಳಿಕೊಂಡೆ ಬಂದಿದ್ದೇನೆ. ಈ ತರ ಸ್ಟಿಂಗ್ ಆಪರೇಷನ್ ನಲ್ಲಿ ಯಾರಾದರೂ ಕಾಂಗ್ರೆಸ್ ಪಕ್ಷದವರು ಇದ್ದರೆ. ಅದರಲ್ಲಿ ಭಾಗಿಯಾಗಿದ್ದರು ಅದು ವಿಡಿಯೋ ಎಲ್ಲಾ ಹೊರಗಡೆ ಬರುತ್ತೆ. ಈಗಾಗಲೇ ಅವರಿಗೆ ಶೋಕಾಸ್ ನೋಟೀಸ್ ಕೊಡಿ ಅಂತ ಹೇಳಿದ್ದು, ಕ್ರಮ ತೆಗೆದುಕೊಳ್ಳೋದಾಗಿಯೂ ತಿಳಿಸಿದ್ದಾರೆ. ವಿಡಿಯೋದಲ್ಲಿ‌ ಯಾರಿದ್ದಾರೆ? ಅವರ‌‌ ಹಿಂದೆ ಯಾರಿದ್ದಾರೆ ಅಂತ‌ ತನಿಖೆ ಮಾಡೋಕೆ ಸಿಐಡಿ,‌ ಸಿಬಿಐ ಎಲ್ಲಾ ಇದೆ. ಆ ರೀತಿ ನೋಡೋಕೆ ಹೋದ್ರೆ ತನಿಖೆ ಬಹಳ ಹಿಂದಿಂದ ಆಗಬೇಕಾಗುತ್ತೆ ಎಂದು ಬಿಕೆ ಹರಿಪ್ರಸಾದ್ ಅವರು ಬಿಜೆಪಿ ವಿರುದ್ಧವೂ ಕಿಡಿಕಾರಿದ್ರು. ಈಗಾಗಲೇ ಅವರಿಗೆ ಕಾರಣ ಕೇಳಿ ನೋಟಿಸ್‌ ನೀಡುವಂತೆ ಸೂಚಿಸಿದ್ದೇನೆ. ನಂತರ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಸ್ಪಷ್ಟಪಡಿಸಿದರು.

ಮೂಲ ವರದಿ: Kannada Prabha ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
politicsBengaluruCongressSiddaramaiahYatrendra SiddaramaiahKrupa Alwa