BLR Today
ಮಂಗಳವಾರ, ನವೆಂಬರ್ 3, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru1 ಗಂಟೆಗಳ ಹಿಂದೆ

ಬೆಂಗಳೂರಿನ ಐಎಂಎ ರಾಜ್ಯ ಶಾಖೆಗೆ ನೂತನ ಪದಾಧಿಕಾರಿಗಳ ಆಯ್ಕೆ

ಬೆಂಗಳೂರಿನ ಐಎಂಎ ರಾಜ್ಯ ಶಾಖೆಗೆ ನೂತನ ಪದಾಧಿಕಾರಿಗಳ ಆಯ್ಕೆ
ಚಿತ್ರ: Prajavani

2026-27ನೇ ಸಾಲಿನ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ರಾಜ್ಯ ಶಾಖೆಯ ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಗಿದೆ. ಡಾ.ಹರೀಶ ದಿಲಂತಬಟ್ಟು ಅವರು ನೂತನ ಅಧ್ಯಕ್ಷರಾಗಿ, ಡಾ.ಕೆ.ಜಿ.ಶಂಕರ್ ನಾರಾಯಣ್ ಅವರು ಗೌರವ ಕಾರ್ಯದರ್ಶಿಯಾಗಿ, ಡಾ.ಟಿ.ಎ.ವೀರಭದ್ರಯ್ಯ ಅವರು ನಿಕಟಪೂರ್ವ ಅಧ್ಯಕ್ಷರಾಗಿ, ಡಾ.ಸರ್ವೇಶ ರಾಜೇ ಅರಸ್ ಅವರು ಚುನಾಯಿತ ಅಧ್ಯಕ್ಷರಾಗಿ, ಖಜಾಂಜಿ ಡಾ.ಎಸ್.ವಿಜಯಾನಂದ, ಜಂಟಿ ಕಾರ್ಯದರ್ಶಿಯಾಗಿ ಡಾ.ಜಿ.ಮಹೇಶ್, ಉಪಾಧ್ಯಕ್ಷ ಸ್ಥಾನಕ್ಕೆ ಡಾ.ಬಸವರಾಜ ಸಜ್ಜನ್, ಡಾ.ಸದಾನಂದ ಪೂಜಾರಿ, ಹಾಗೂ ಡಾ.ಸಿದ್ದೇಶ್ ಸಿರವಾರ್, ಮಹಿಳಾ ಉಪಾಧ್ಯಕ್ಷರಾಗಿ ಡಾ.ಶೋಭಾ ಪ್ರಕಾಶ್, ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಪದ್ಮ ಪ್ರಕಾಶ್ ಎ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruIMAMedical AssociationPoliticsHealth