ಬೆಂಗಳೂರಿನ ನಂದನ ಪ್ಯಾಲೇಸ್ ಹೋಟೆಲ್ ಸಿಬ್ಬಂದಿಗೆ 15 ಕಾರು ಮತ್ತು 22 ಬೈಕ್ ಗಿಫ್ಟ್
ಬೆಂಗಳೂರಿನ ನಂದನ ಪ್ಯಾಲೇಸ್ ಹೋಟೆಲ್‌ನಲ್ಲಿ ಉತ್ತಮವಾಗಿ ಕರ್ತವ್ಯ ಪಾಲನೆ ಮಾಡಿದ ವಿವಿಧ ಹಂತದ ಕಾರ್ಮಿಕರಿಗೆ ಕಾರು ಮತ್ತು ಬೈಕ್ ಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಸಂಭ್ರಮಿಸಲಾಯಿತು. ನಂದನ ಅಚಿವರ್ಸ್ ಡೇ ಕಾರ್ಯಕ್ರಮದಲ್ಲಿ ನಟ ರಮೇಶ್ ಅರವಿಂದ್ ಮತ್ತು ನಂದನ ಪ್ಯಾಲೇಸ್ ನ ಸಿಎಂಡಿ ಡಾ.ಆರ್.ರವಿಚಂದರ್ ಕಾರ್ಮಿಕರಿಗೆ ವಾಹನಗಳನ್ನು ಊಡುಗೊರೆಯಾಗಿ ನೀಡಿದರು. ಹೋಟೆಲ್ ಉದ್ಯಮ ಆರಂಭಿಸಿದ ದಿನಗಳಿಂದ ಜೊತೆಯಲ್ಲಿರುವ, ಉತ್ತಮವಾಗಿ ಕರ್ತವ್ಯ ಪಾಲನೆ ಮಾಡಿದ ಚೆಫ್, ಸಪ್ಲೈಯರ್, ಚಾಲಕ, ಸೂಪರ್ ವೈಸರ್, ಜನರಲ್ ಮ್ಯಾನೇಜರ್, ಮ್ಯಾನೇಜರ್ ಸೇರಿದಂತೆ ವಿವಿಧ ಹಂತದ ಕಾರ್ಮಿಕರನ್ನು ಗುರುತಿಸಿ 15 ಕಾರು ಮತ್ತು 22 ಬೈಕ್ ಗಳನ್ನು ನೀಡಿದ್ದು ಇದರ ಮೊತ್ತ ಕೋಟಿ ರು.ಗೂ ಅಧಿಕವಾಗಿದೆ.
ಮೂಲ ವರದಿ: Asianet Suvarna News
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruNandan Palace HotelEmployee RecognitionAutomobile Gifts


