BLR Today
ಶುಕ್ರವಾರ, ಅಕ್ಟೋಬರ್ 30, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru3 ಗಂಟೆಗಳ ಹಿಂದೆ

ಮಿಥುನ್ ಮುನ್ನಡೆ; ತಾನ್ಯಾಗೆ ಆಘಾತ

ಮಿಥುನ್ ಮುನ್ನಡೆ; ತಾನ್ಯಾಗೆ ಆಘಾತ
ಚಿತ್ರ: Prajavani

ಸ್ಥಳೀಯ ತಾರೆ ಮಿಥುನ್ ಮಂಜುನಾಥ್ ಅವರು ಬೆಂಗಳೂರಿನಲ್ಲಿ ನಡೆಯುತ್ತಿರುವ ಕೆಬಿಎ ಡೈಮಂಡ್‌ ಜುಬಿಲಿ ಇಂಡಿಯಾ ಇಂಟರ್‌ನ್ಯಾಷನಲ್‌ ಚಾಲೆಂಜ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಗುರುವಾರ ಕ್ವಾರ್ಟರ್‌ಫೈನಲ್‌ಗೆ ಮುನ್ನಡೆದರು. ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಮಿಥುನ್ ಅವರು ಆರ್ಯ ಭೀವ್‌ಪಥಕಿ ವಿರುದ್ಧ 21–19, 21–12ರಿಂದ ನೇರ ಗೇಮ್‌ಗಳಲ್ಲಿ ಗೆದ್ದರು. ಸ್ಥಳೀಯ ಆಟಗಾರ್ತಿ ತಾನ್ಯಾ ಹೇಮಂತ್ ಅವರು ಜಪಾನ್‌ನ ಎನ್‌.ಶಿರಕಾವಾ ಎದುರು 16–21, 24–22, 15–21ರಿಂದ ಪರಾಭವಗೊಂಡರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruBadmintonSports