BLR Today
ಗುರುವಾರ, ಸೆಪ್ಟೆಂಬರ್ 24, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru1 ಗಂಟೆಗಳ ಹಿಂದೆ

ಬೆಂಗಳೂರಿನ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ: ಸಾರ್ವಜನಿಕರೊಂದಿಗೆ ಸಭೆ ಮಾಡಿದ ಸಚಿವ ಕೃಷ್ಣಬೈರೇಗೌಡ

ಬೆಂಗಳೂರಿನ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ: ಸಾರ್ವಜನಿಕರೊಂದಿಗೆ ಸಭೆ ಮಾಡಿದ ಸಚಿವ ಕೃಷ್ಣಬೈರೇಗೌಡ
ಚಿತ್ರ: TV9 Kannada

ಬೆಂಗಳೂರಿನ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ: ಸಾರ್ವಜನಿಕರೊಂದಿಗೆ ಸಭೆ ಮಾಡಿದ ಸಚಿವ ಕೃಷ್ಣಬೈರೇಗೌಡ

ಗ್ರೇಟರ್ ಬೆಂಗಳೂರು ಪ್ರಾಧಿಕಾರ ವತಿಯಿಂದ ಇಂದು ನೆಹರು ತಾರಾಲಯದಲ್ಲಿ ಸಚಿವ ಕೃಷ್ಣಬೈರೇಗೌಡ ಅವರೊಂದಿಗೆ ಸಾರ್ವಜನಿಕ ಸಮಾಲೋಚನಾ ಸಭೆ ನಡೆಯಿತು. ನಗರದಲ್ಲಿ ಕಸದ ಬಗ್ಗೆ ನಿರಂತರ ದೂರುಗಳು ಕೇಳಿ ಬರುತ್ತಿದ್ದ ಹಿನ್ನಲೆ ಸಮಸ್ಯೆ ನಿವಾರಿಸುವ ಬಗ್ಗೆ ಸಭೆ ಮಾಡಲಾಯಿತು. ಕಸ ನಿರ್ವಹಣೆಯಲ್ಲಿ ಸುಧಾರಣೆ ಮತ್ತು ಟೆಂಡರ್ ಸವಾಲುಗಳು ಕುರಿತು ಸಚಿವರು ಮಾಹಿತಿ ನೀಡಿದರು. ಬಲ್ಕ್ ಜನರೇಟರ್ಸ್‌ಗಳಲ್ಲಿ ಕೇವಲ 2 ಸಾವಿರ ಜನ ಮಾತ್ರ ಅಧಿಕೃತವಾಗಿ ಟೈ-ಅಪ್ ಆಗಿದ್ದು, ಉಳಿದ ಸುಮಾರು 48 ಸಾವಿರ ಬಲ್ಕ್ ಜನರೇಟರ್ಸ್‌ಗಳು ಮನೆ ಕಸ ಸಂಗ್ರಹಿಸುವವರಿಗೆ ಸ್ಥಳೀಯವಾಗಿ ಕಸ ನೀಡುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.

ಮೂಲ ವರದಿ: TV9 Kannada ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruWaste ManagementKrishna BiregowdaBBMP