BLR Today
ಸೋಮವಾರ, ಅಕ್ಟೋಬರ್ 12, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru1 ಗಂಟೆಗಳ ಹಿಂದೆ

ಬೆಂಗಳೂರಿನ ಮೆಟ್ರೋ ಹಳೆಯಲ್ಲಿ ವ್ಯಕ್ತಿ ಹಾರಿದ ಬಳಿಕ ಸಂಚಾರ ವ್ಯತ್ಯಯ

ಬೆಂಗಳೂರಿನ ಮೆಟ್ರೋ ಹಳೆಯಲ್ಲಿ ವ್ಯಕ್ತಿ ಹಾರಿದ ಬಳಿಕ ಸಂಚಾರ ವ್ಯತ್ಯಯ
ಚಿತ್ರ: Prajavani

ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಸೋಮವಾರ ದೀಪಾಂಜಲಿ ನಗರ ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಹಳಿಗೆ ವ್ಯಕ್ತಿಯೊಬ್ಬರು ಹಾರಿದ್ದರಿಂದ ಮೆಟ್ರೋ ಸಂಚಾರ ವ್ಯತ್ಯಯಗೊಂಡಿತು. ರಾತ್ರಿ ಸುಮಾರು 8.15ರ ಹೊತ್ತಿಗೆ ನಿಲ್ದಾಣದಿಂದ ದೂರ ಸಾಗಿ ಹಳಿಗೆ ಹಾರಿದ್ದರು. ಮೆಟ್ರೋ ಸಿಬ್ಬಂದಿಯ ಗಮನಕ್ಕೆ ಬಂದಿದ್ದರಿಂದ ರೈಲು ಡಿಕ್ಕಿಯಾಗುವುದು ಸ್ವಲ್ಪದರಲ್ಲೇ ತಪ್ಪಿದೆ. ರಾತ್ರಿ 8.30ರ ನಂತರ ಮೆಟ್ರೋ ಸಂಚಾರ ಆರಂಭಗೊಂಡಿತು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruMetroDisruptionIncident