‘ಕರ್ತವ್ಯ ಆ್ಯಪ್’ ಮೂಲಕ ಮಹಿಳಾ ನೌಕರರಿಗೆ ಮುಟ್ಟಿನ ರಜೆ
ರಾಜ್ಯದ ವಿವಿಧ ಇಲಾಖೆಗಳ ಮಹಿಳಾ ನೌಕರರು ಇನ್ನು ಮುಂದೆ ‘ಕರ್ತವ್ಯ ಆ್ಯಪ್’ ಮೂಲಕ ಅರ್ಜಿ ಸಲ್ಲಿಸಿ, ಮುಟ್ಟಿನ ರಜೆ ಪಡೆಯಬಹುದು. ಈ ಕುರಿತು ಪ್ರಜಾ ಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಅವರು ಸುತ್ತೋಲೆ ಹೊರಡಿಸಿದ್ದಾರೆ. ಕರ್ತವ್ಯ ಆ್ಯಪ್ ಮೂಲಕ ಅರ್ಜಿ ಸಲ್ಲಿಸಿದರೆ ಒಂದು ದಿನದ ಮುಟ್ಟಿನ ರಜೆ ತಕ್ಷಣವೇ ಮಂಜೂರಾಗಲಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ. ‘ಕೆಲವು ಅಧಿಕಾರಿಗಳು ಮುಟ್ಟಿನ ರಜೆ ಅನುಮೋದಿಸಲು ಪ್ರಮಾಣಪತ್ರವನ್ನು ಕೇಳುತ್ತಿದ್ದರು. ಇನ್ನು ಮುಂದೆ ಅದನ್ನು ಕೇಳುವಂತಿಲ್ಲ’ ಎಂದಿದೆ.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruHRGovernmentWomen's Rights


