BLR Today
ಸೋಮವಾರ, ನವೆಂಬರ್ 2, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru2 ಗಂಟೆಗಳ ಹಿಂದೆ

ಹ್ಯಾಕ್‌ಫೆಸ್ಟ್-2026‌ನಲ್ಲಿ ಮೇಧಾ ಉಮೇಶ್ ಮತ್ತು ಸಾಯಿ ಯಶಸ್ವಿ ಕಂಚರ್ಲ ಅವರಿಗೆ ಬಹುಮಾನ

ಹ್ಯಾಕ್‌ಫೆಸ್ಟ್-2026‌ನಲ್ಲಿ ಮೇಧಾ ಉಮೇಶ್ ಮತ್ತು ಸಾಯಿ ಯಶಸ್ವಿ ಕಂಚರ್ಲ ಅವರಿಗೆ ಬಹುಮಾನ
ಚಿತ್ರ: Prajavani

ಬೆಂಗಳೂರಿನ ಸಾಯಿ ವಿದ್ಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ರಾಷ್ಟ್ರಮಟ್ಟದ 'ಹ್ಯಾಕ್‌ಫೆಸ್ಟ್-2026' ಹ್ಯಾಕಥಾನ್‌ನಲ್ಲಿ ಮೇಧಾ ಉಮೇಶ್ ಮತ್ತು ಸಾಯಿ ಯಶಸ್ವಿ ಕಂಚರ್ಲಾ ಅವರು ₹20 ಸಾವಿರ ನಗದು ಬಹುಮಾನ ಗೆದ್ದರು. 'ಹಸಿರು ತಂತ್ರಜ್ಞಾನ ಮತ್ತು ಪರಿಣಾಮ' ವಿಭಾಗದಲ್ಲಿ ಮೇಧಾ ಮತ್ತು ಸಾಯಿ ಯಶಸ್ವಿ ಅವರು 24 ಗಂಟೆಗಳಲ್ಲಿ ಅಭಿವೃದ್ಧಿಪಡಿಸಿದ 'ಕಾರ್ಬನ್ ಹೆಜ್ಜೆ ಗುರುತುಗಳ ಮೇಲ್ವಿಚಾರಣೆ ಮತ್ತು ನಿಯಂತ್ರಣ ವ್ಯವಸ್ಥೆ'ಗೆ ಪ್ರಥಮ ಬಹುಮಾನ ಸಿಕ್ಕಿತು. ಹಾರ್ಡ್‌ವೇರ್, ಸಾಫ್ಟ್‌ವೇರ್ ತಂತ್ರಜ್ಞಾನದ ನೆರವಿನಿಂದ ರೂಪಿಸಿದ ಈ ವ್ಯವಸ್ಥೆಯು ಇಂಗಾಲದ ಹೊರಸೂಸುವಿಕೆಯನ್ನು ಗುರುತಿಸುವುದು ಮತ್ತು ಪರಿಸರ ಸ್ನೇಹಿ ಅಭ್ಯಾಸಗಳನ್ನು ಉತ್ತೇಜಿಸುವ ಅಂಶಗಳನ್ನು ಒಳಗೊಂಡಿದೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruHackathonTechnologyEducation